ಸಾರ್ವಜನಿಕ ಎಚ್ಚರಿಕೆ ಪ್ರಕಟಣೆ

ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕು ಎತ್ತಿನಹೊಳೆ ಯೋಜನೆಯ ವಿದ್ಯುತ್ ಲೈನ್-4 ಕಾಮಗಾರಿಯನ್ನು 400/220 ಕೆವಿ ವಿದ್ಯುತ್‌ ಸ್ವೀಕರಣ ಕೇಂದ್ರ ಹೆಬ್ಬನಹಳ್ಳಿ ಯಿಂದ ದೊಡ್ಡನಾಗರದಲ್ಲಿ ನೂತನವಾಗಿ ನಿರ್ಮಿಸಿರುವ 220/66/11 ಕೆವಿ ವಿದ್ಯುತ್ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ 09.00ಕಿ.ಮೀ ಅಂತರದ 220 ಕೆವಿ Double Circuit ಮಾರ್ಗದ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು, ಈಗಾಗಲೇ ಚಾರ್ಜ್ ಮಾಡಲಾಗಿರುತ್ತದೆ.

220/66/11 ಕೆ.ವಿ. ಚಿಕ್ಕನಗರ ವಿದ್ಯುತ್ ಸಬ್‌ಸ್ಟೇಷನ್ ನಿಂದ ಹೆಬ್ಬಸಾಲೆ ಮಾರ್ಗವಾಗಿ ವಿಯರ್-6, 7 ಮತ್ತು 8ಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ಕೆಲಸವು ಪೂರ್ಣಗೊಂಡಿದ್ದು ಈ ಮಾರ್ಗದಲ್ಲಿ ವಿದ್ಯುತ್ತನ್ನು ಹರಿಸಲಾಗುವುದು ಹಾಗೂ ವಿಯರ್-1 ರಿಂದ ವಿಯರ್-6, 7 & 8 ರ ರೈಸಿಂಗ್ ಮೈನ್ ಕೆಲಸಗಳು ಪೂರ್ಣಗೊಂಡಿದ್ದು ಪೈಪ್‌ ಲೈನ್ ಮಾರ್ಗದಲ್ಲಿ ಪರಿಕ್ಷಾರ್ಥ ಚಾಲನೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಹೆಗ್ಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೆನ್ನಲಿ, ಹೆಬ್ಬಸಾಲೆ, ದೇವಿಹಳ್ಳಿ, ದೋಣಿಗಾಲು, ರುಂಬರಡಿ ಕಾಫಿ ಎಸ್ಟೇಟ್, ರೆಸಗಾನಹಳ್ಳಿ, ಕಿರಣ್ ಎಸ್ಟೇಟ್, ಪ್ರಕಾಶ್ ಎಸ್ಟೇಟ್, ಎಂ.ಎಂ.ಸಿ.ಎಲ್, ಕಾಡುಗದ್ದೆ, ಕಡಗರವಳ್ಳಿ, ಆಲುವಳ್ಳಿ, ಹಿರದನಹಳ್ಳಿ ಮತ್ತು ಮೊಗೇನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ.

ಆದ್ದರಿಂದ ಸಾರ್ವಜನಿಕರು ಈ ಮಾರ್ಗದ ವಿದ್ಯುತ್ ಗೋಪುರವನ್ನು ಹತ್ತುವುದಾಗಲಿ, ಅವುಗಳಿಗೆ ದನ-ಕರುಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಹಾಗೂ ಪೈಪ್‌ಲೈನ್ ಗಳ ಮೇಲೆ ಸಂಚರಿಸುವುದಾಗಲೀ ಹಾಗೂ ವಾಹನಗಳನ್ನು ನಿಲುಗಡೆ ಮಾಡಬಾರದೆಂದು ತಿಳಿಸಿದೆ.

ಈ ಕುರಿತು ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಮೇಲೆ ತಿಳಿಸಿರುವ ಯಾವುದೇ ತರಹದ ದುಷ್ಕೃತ್ಯಗಳಿಗೆ ಒಳಗೊಂಡ ಅಪಘಾತ ಅಥವಾ ಹಾನಿ ಸಂಭವಿಸಿದರೆ ಸಾರ್ವಜನಿಕರು/ಗ್ರಾಮಸ್ಥರೇ ಜವಾಬ್ದಾರರಾಗಿರುತ್ತಾರೆ ಎಂದು ಈ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುತ್ತಿದ್ದೇವೆ.

ಸಾರ್ವಜನಿಕರ ಬೇಜವಾಬ್ದಾರಿಯಿಂದ ಆಗುವ ಅನಾಹುತಗಳಿಗೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಸಕಲೇಶಪುರ ಹಾಗು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಸನವು ಜವಾಬ್ದಾರಿಯಾಗಿರುವುದಿಲ್ಲ. ಎಂದು ಕಾರ್ಯಪಾಲಕ ಇಂಜಿನಿಯರ್, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, ಎತ್ತಿನಹೊಳೆ ಯೋಜನಾ ವಿಭಾಗ ನಂ.1, ಸಕಲೇಶಪುರ, ಅವರು ತಿಳಿಸಿರುತ್ತಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *