
ಬೇಲೂರು : ಸ್ಕೂಟಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಸಿಟ್ಟಗೆದ್ದ ಗ್ರಾಮಸ್ಥರು ರಸ್ತೆ ತಡೆ ಮೂಲಕ ಬಸ್ ತಡೆದು ಪ್ರತಿಭಟಿಸಿದ ಘಟನೆ ತಾಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ
ತಹಸೀಲ್ದಾರ್ ಎಂ.ಮಮತಾ ಮನವೊಲಿಕೆಯಿಂದ ಪ್ರತಿಭಟನೆ ಕೈಬಿಡಲಾಯಿತು.
ಪಡುವಳಲು ಗ್ರಾಮದ ೩೮ ವರ್ಷದ ಶೋಭ ಎಂಬುವವರು ಕಾರ್ಖಾನೆ ಕೆಲಸಕ್ಕೆಂದು ತನ್ನ ಸ್ಕೂಟಿಯಲ್ಲಿ ಪಡುವಳಲು ತಾರೀಮರ ರಸ್ತೆಯಲ್ಲಿ ತೆರಳುತಿದ್ದ ಸಂದರ್ಭ ಹಾಸನ ಕಡೆಯಿಂದ ಬೇಲೂರಿಗೆ ಬರುತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದಾಗ ಸ್ಕೂಟಿ ಬಸ್‌ನ ಮುಂಭಾಗದ ಚಕ್ರಕ್ಕೆ ಸಿಲುಕಿದ್ದು ಅದೃಷ್ಠವಸಾತ್ ಶೋಭ ಎಂಬುವವರಿಗೆ ಗಂಭಿರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಸ್ಕೂಟಿ ಸ್ವಲ್ಪ ನುಜ್ಜುಗುಜ್ಜಾಗಿದೆ. ವಿಷಯ ತಿಳಿದ ಪಡುವಳಲು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು, ದಿಡೀರೆಂದು ಬಸ್ ತಡೆದು ಲೋಕೋಪಯೋಗಿ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ಬಾಗದಲ್ಲಿ ವಾಹನಗಳು ಸಂಚರಿಸದಷ್ಟು ರಸ್ತೆಗಳು ಗುಂಡಿ ಬಿದ್ದಿದ್ದು, ತಕ್ಷಣ ದುರಸ್ಥಿಗೊಳಿಸುವಂತೆ ಆಗ್ರಹಿಸಿದರು.
ಬಸ್ ಹಾಗೂ ಸ್ಕೂಟಿ ನಡುವಿನ ಅಪಘಾತದಲ್ಲಿ ಗಾಯಗೊಂಡ ಶೋಭಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಂತರ ತಹಸಿಲ್ದಾರ್ ಎಂ.ಮಮತಾ, ಗ್ರಾಮಸ್ಥರನ್ನು ಸಮಾದಾನ ಪಡಿಸಿ ಸದ್ಯಕ್ಕೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.


