
ಸಕಲೇಶಪುರ : ಕಾಡಾನೆ ಉಪಟಳದಿಂದ ರೈತರು ಕಾರ್ಮಿಕರು ಕೃಷಿಕರು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮಕ್ಕಳು ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆಯಿಂದ ಮನೆ ಬಿಟ್ಟು ಹೊರಗಡೆ ಹೋಗುವುದಕ್ಕೆ ಭಯದ ವಾತಾವರಣವಾಗಿದೆ.
ಬಾಗೆ ಮತ್ತು ಬೆಳಗೋಡಿನಲ್ಲಿ ಅರಣ್ಯ ಇಲಾಖೆಯವರು ಆನೆ ಮಾಹಿತಿಯ ಎಲೆಕ್ಟ್ರಿಕ್ ಬೋರ್ಡ್ ಹಾಕಿರುವುದು ಕೆಟ್ಟು ಹೋಗಿದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕೆಂದು ನಾಗೇಂದ್ರ ಹೊಸಕೊಪ್ಪಲು ಮನವಿ ಮಾಡಿದ್ದಾರೆ.

