ಆಲೂರು: ತಾಲೂಕಿನ ಜನತೆಗೆ ಸದ್ಯಕ್ಕೆ ಸಾರ್ಥಕತೆಯ ಭಾವ, ಬಹುದಿನದ ಸಾರ್ವಜನಿಕ ಹಿತಾಸಕ್ತಿ ಇಂದು ನೆರವೇರಿದೆ.

ಆಲೂರು ಭಾಗದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಡಯಲೀಸಿಸ್ ಕೇಂದ್ರವನ್ನು ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ರವರು ಉದ್ಘಾಟಿಸಿದರು.

ಅವರು ಮಾತನಾಡಿ ಜಿಲ್ಲಾ ಕೇಂದ್ರವದ ಹಾಸನಕ್ಕೆ ರೋಗಿಗಳು ನಿತ್ಯ ಸರತಿ ಸಾಲಿನಲ್ಲಿ ನಿಂತು ದಿನವಿಡೀ ಕಾದು ಅಲೆಯುವ ಪ್ರಮೇಯ ತಪ್ಪಿದೆ.

ದಯಮಾಡಿ ತಾಲೂಕಿನ ಸಾರ್ವಜನಿಕರು ಇದನ್ನ ಸದುಪಯೋಗ ಮಾಡಿಕೊಳ್ಳಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳಿಗೆ ಸತಾಯಿಸದಂತೆ ಸೂಕ್ತ ಚಿಕಿತ್ಸೆಯನ್ನು ಸಾಕಾಲದಲ್ಲಿ ನೀಡಬೇಕೆಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಧಿಕಾರಿ ಜಯಪ್ರಕಾಶ್ ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *