ಹಾಸನ: ನಗರದ ಸತ್ಯಮಂಗಲ ಸಮೀಪ ಇರುವ ಟೈಮ್ಸ್ ಗುರುಕುಲ ಸಿ.ಬಿ.ಎಸ್.ಇ. ಶಾಲೆಯಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಅಕ್ಷರಭ್ಯಾಸವನ್ನು ನಗರದ ಸಾಲಗಾಮೆ ರಸ್ತೆ ಬಳಿ ಇರುವ ಶ್ರೀ ಸಾಯಿಬಾಬ ದೇವಾಲಯದಲ್ಲಿ ಶ್ರೀ ಗಣೇಶ ಮತ್ತು ಸರಸ್ಪತಿಗೆ ವಿಶೇಷ ಪೂಜೆ ಸಲ್ಲಿಸಿ ದೀಪ ಹಚ್ಚಿ ಮಕ್ಕಳಿಗೆ ಅಕ್ಷರಬ್ಯಾಸ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲಾಯಿತು.

ಶ್ರೀಶಿರಡಿ ಸಾಯಿ ಮಂದಿರದ ಕಾರ್ಯದರ್ಶಿ ಪ್ರಸಾದ್ ಮಾತನಾಡಿ, ಶ್ರೀ ಸಾಯಿಬಾಬ ದೇವಸ್ಥಾನ ಪ್ರಾರಂಭವಾದ ದಿನದಿಂದಲು ಇಂತಹ ಅಕ್ಷರಭ್ಯಾಸ ಕಾರ್ಯಕ್ರಮ ನಡೆದಿರಲಿಲ್ಲ. ಇದೊಂದು ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಮಕ್ಕಳ ಅಕ್ಷರಭ್ಯಾಸದಲ್ಲಿ ಪೋಷಕರು ಪಾಲ್ಗೊಂಡಿರುವುದು ಉತ್ತಮವಾಗಿದೆ.

ಪ್ರತಿವರ್ಷ ಈ ದೇವಾಲಯದಲ್ಲಿ ವಾರ್ಷಿಕೋತ್ಸವ ನಡೆಸಲಾಗುತ್ತಿದ್ದು, ಈಗ ಒಳ್ಳೆ ಅವಕಾಶ ನಮಗೆ ಸಿಕ್ಕಿದೆ. ಇಲ್ಲಿಂದಲೇ ಮಕ್ಕಳ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ. ಇಷ್ಟೊಂದು ಮಕ್ಕಳಲ್ಲಿ ಯಾರು ವಿಶ್ವೇಶ್ವರಯ್ಯ, ಲಾಲ್ ಬಹದ್ದೂರ್ ಶಾಸ್ತ್ರಿ ಆಗುತ್ತಾರೆ ಗೊತ್ತಿಲ್ಲ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಇಲ್ಲಿನ ಪೋಷಕರಲ್ಲಿ ತಮ್ಮ ಮಕ್ಕಳು ವೈದ್ಯರಾಗುತ್ತಾರೆ, ಇಂಜಿನಿಯರ್ ಆಗುತ್ತಾರೆ ಎನ್ನುವ ಯೋಚನೆ ಇರುತ್ತದೆ. ಆದರೇ ಮಕ್ಕಳಿಗೆ ಹೆಚ್ಚಿನ ಒತ್ತಡ ಬಾರದ ಆಗೇ ನೋಡಿಕೊಂಡು ಅವರ ಅಭಿರುಚಿಗೆ ಅವಕಾಶ ಕೊಡುವ ಮೂಲಕ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಟೈಮ್ಸ್ ಗುರುಕುಲ ಸಿ.ಬಿ.ಎಸ್.ಇ. ಶಾಲೆ ಅಧ್ಯಕ್ಷರಾದ ಎ.ಬಿ. ಸುರೇಂದ್ರ ಕುಮಾರ್ ಮಾತನಾಡಿ, ಪ್ರಸ್ತೂತದಲ್ಲಿ ಪೋಷಕರ ಬಯಕೆ ಎಂದರೇ ನಮ್ಮ ಮಕ್ಕಳು ವೈದ್ಯರು ಇಲ್ಲದೇ ಇಂಜಿನಿಯರ್ ಆಗಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಮಕ್ಕಳಿಗೆ ಯಾವ ರಂಗದಲ್ಲಿ ಆಸಕ್ತಿ ಇದೆ ಅದನ್ನೆ ಪ್ರೋತ್ಸಹಿಸಿ. ಕ್ರಿಕೆಟ್ ಆಟಗಾರ, ನೃತ್ಯಪಟು ಇಲ್ಲವೇ ಫಿಲಂ ಸ್ಟಾರ್ ಆಗುತ್ತಾರೋ ಆಗಲಿ.

ನಾವು ಮಕ್ಕಳ ಮೇಲೆ ಹೆಚ್ಚು ಒತ್ತಡವನ್ನು ಏರಲು ಹೋಗಬಾರದು, ಒತ್ತಡ ಏರಿದರೇ ದಾರಿ ತಪ್ಪಬಹುದು. ತಪ್ಪಿದ ಅನೇಕ ಉದಾಹರಣೆಗಳಿವೆ ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಯಂತ್ರಿಸಬೇಕು. ಇಂದಿನ ಮಕ್ಕಳಿಗೆ ಕೈಲಿ ಮೊಬೈಲ್ ಕೊಟ್ಟು ಊಟ ಮಾಡಬೇಕಾದ ಪರಿಸ್ಥಿತಿ ತಂದಿದ್ದೇವೆ. ಮನೆಯಲ್ಲಿ ಕಲಿತಿರುವುದರಿಂದ ಶಾಲೆಯಲ್ಲೂ ಕೂಡ ಮಕ್ಕಳು ಸ್ಮಾರ್ಟ್ ಟಿವಿ ಹಾಕಿದ ಮೇಲೆ ಊಟ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದು ಬೇಸರವ್ಯಕ್ತಪಡಿಸಿದರು.

ಮೊಬೈಲ್ ಕೊಟ್ಟು ಊಟ ಮಾಡಿಸುತ್ತಿರುವುದು ಒಂದು ಕೆಟ್ಟ ಸಂಪ್ರದಾಯ ಕೂಡಲೇ ಕಡಿಮೆ ಮಾಡಬೇಕೆಂದು ಮನವಿ ಮಾಡಿ ಸಲಹೆ ನೀಡಿದರು.

ಇದೆ ವೇಳೆ ಶ್ರೀಶಿರಡಿ ಸಾಯಿ ಮಂದಿರದ ಹೆಚ್.ಎಸ್. ನೀಲಕಂಠ, ಚಂದ್ರಶೇಖರ್, ಟೈಮ್ಸ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಪ್ರಾಂಶುಪಾಲರಾದ ಉಮ.ಎಸ್. ಪಾಟೀಲ್, ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *