
ಸಕಲೇಶಪುರ :- ತಾಲೂಕಿನ ಹೆತ್ತೂರು ಹೋಬಳಿಯ ಹೊಸಳ್ಳಿ ಸುಧಾಕರ್ ಅವರ ಕಾಫಿ ತೋಟಕ್ಕೆ ಬಂದ ಕಾಡಾನೆಗಳು ಕಾಫಿ ತೋಟ ಹಾಗೂ ಏಲಕ್ಕಿ ತೋಟದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟುಮಾಡಿವೆ.
ಕಾಡಾನೆಗಳು ಸುಮಾರು 50 ಹೆಚ್ಚು ಏಲಕ್ಕಿ ಗಿಡಗಳನ್ನು ಹಾಗೂ ಸುಮಾರು ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿದೆ. ಪ್ರತಿದಿನ ತಮ್ಮ ತೋಟವನ್ನು ಕಾಡಾನೆಗಳಿಂದ ರಕ್ಷಿಸಿಕೊಳ್ಳಲು ಕಷ್ಟವಾಗುತ್ತಿದೆ.
ಸರ್ಕಾರ ಕೊಡುವ ಪರಿಹಾರಕ್ಕಿಂತ ಕಾಡಾನೆಯನ್ನು ಹೇಗಾದರೂ ಮಾಡಿ ಈ ಭಾಗದಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಿದರೆ ನೆಮ್ಮದಿಯಾಗಿ ರೈತರು ತಮ್ಮ ಬೆಳೆಗಳನ್ನು ಬೆಳೆದುಕೊಂಡು ಜೀವನ ಸಾಗಿಸುತ್ತಾರೆ ಎಂದು ಹೊಸಳ್ಳಿ ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಹೆತ್ತೂರು, ವಳಲಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ, ಮರನಹಳ್ಳಿ, ಮರ್ಜನಹಳ್ಳಿ ಸುತ್ತಮುತ್ತ ಸುಮಾರು ಹತ್ತಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು ಜನರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹಾಗೂ ಪ್ರಾಣವನ್ನು ರಕ್ಷಿಸಿಕೊಳ್ಳುವ ಆತಂಕದಲ್ಲಿ ಇರುವಂಥಗಿದೆ.



