
ಸಕಲೇಶಪುರ :- ತಾಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಶುಕ್ರವಾರ ಸಂತೆಯ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ 1998-99 ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುವಂದನ ಕಾರ್ಯಕ್ರಮವನ್ನು ಹಾಗೂ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
25 ವರ್ಷಗಳ ಹಿಂದೆ ಓದಿದ ಶಾಲೆಯಲ್ಲಿ ಈ ರೀತಿಯ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲಾ ಹಳೆ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ತಮಗೆ ವಿದ್ಯೆ ಕಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದ ಶಿಕ್ಷಕರನ್ನು ಸಂಪರ್ಕಿಸುವ ಮೂಲಕ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಜೊತೆಗೆ ತಾವು ಕಲಿತ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಎಲ್ಲಾ ಹಳೆ ಸ್ನೇಹಿತರು ಸ್ವಂತ ಖರ್ಚಿನ ಹಣ ಕೂಡಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಹಂಚಿದರು.
ಗುರುವಂದನಾ ಕಾರ್ಯಕ್ರಮಕ್ಕೆ ತಮ್ಮ ಶಿಷ್ಯ ವೃಂದರ ಒತ್ತಾಯದ ಮೇಲೆ ಗೆ ಬಂದ ಟಿ. ಏನ್ ಶಿವಕುಮಾರ್ ತಮ್ಮ ಹಳೆ ವಿದ್ಯಾರ್ಥಿಗಳ ಜೋತೆ ಮಾತನಾಡುತ್ತಾ ” ನಾನು ವಿದ್ಯಾರ್ಥಿಗಳಿಗೆ ಯಾವಾಗಲೂ ನೀವು ಎಸ್.ಎಸ್.ಎಲ್.ಸಿ ಯ ನಂತರ ಉನ್ನತ ವ್ಯಾಸಂಗವನ್ನು ಮಾಡಿ ಜೀವನೋಪಾಯಕ್ಕೆ ಯಾವುದೇ ವೃತ್ತಿ ರಂಗವನ್ನು ಜೀವನೋಪಾಯಕ್ಕೆ ಆಯ್ಕೆ ಮಾಡಿಕೊಂಡಿದ್ದರು ಕೂಡ ಅದರಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ರೀತಿ ಬದುಕಿದರೆ ಸಾರ್ಥಕ ಎಂದು ಹೇಳುತ್ತಿದ್ದೆ .
ಆ ನಿಟ್ಟಿನಲ್ಲಿ ಈ ಹಳೆ ವಿದ್ಯಾರ್ಥಿಗಳು ಬದುಕುತ್ತಿದ್ದಾರೆ. ನನ್ನ ನಿವೃತ್ತಿ ಜೀವನದ 20 ವರ್ಷಗಳ ಕಳೆದರೂ ಕೂಡ ಇವರ ಸಂಪರ್ಕವಿರುವುದು ಹಾಗೂ ಆಗ ತೋರುತ್ತಿದ್ದ ಗೌರವ ಈಗಲೂ ಉಳಿಸಿಕೊಂಡು ಬಂದಿರುವುದು ನನಗೆ ಖುಷಿಯ ಜೊತೆಗೆ ನನ್ನ ವೃತ್ತಿಯ ಬಗ್ಗೆ ಹೆಮ್ಮೆ ಪಡುವಂತಾಗಿದೆ ಇವರ ಸಮಾಜಮುಖಿ ಕೆಲಸಗಳ ಮೂಲಕ ಸಮಾಜಕ್ಕೆ ಉದಾರಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ತಮ್ಮ ಶಿಕ್ಷಕರ ಜೊತೆ ತಮ್ಮ ಓದಿನ ದಿನಗಳ ಬಗ್ಗೆ ನೆನೆಯುತ್ತಾ, ತಾವು ಶಾಲೆಯಲ್ಲಿ ತುಂಟಾಟ ಮಾಡಿ ಶಿಕ್ಷಕರಿಂದ ಏಟು ತಿಂದ ಸನ್ನಿವೇಶಗಳನ್ನು ಶಿಕ್ಷಕರೊಂದಿಗೆ ಹಂಚಿಕೊಂಡರು.
ನಂತರ ಗುರುಗಳಾದ ಟಿ.ಎನ್ ಶಿವಕುಮಾರ್, ವೈ.ಬಿ ನಂಜಪ್ಪ,ಜಯಶ್ರೀ, ಎಂಪಿ ಸದಾಶಿವಪ್ಪ, ಬಿ. ಏನ್ ತ್ಯಾಗರಾಜ್,ಎಚ್.ಕೆ ವೆಂಕಟೇಶ್, ಸಹಾಯಕರಾದ ಜಗದೀಶ್ ಹಾಗೂ ನಾಗರಾಜ್ ರನ್ನು ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಚಂದನ್, ಬಿ.ಟಿ ಕಿರಣ್, ಅವಿನಾಶ್, ಸಂತೋಷ್, ಪುರುಷೋತ್ತಮ್, ರಾಘವೇಂದ್ರ, ಭರತ್, ಜಯಪ್ರಕಾಶ್, ಹರೀಶ್, ಸುಜಿತ್, ಅಶ್ವಿನ್,ರವಿ,ಯಶೋಧರ, ಅಶ್ವಿನಿ, ರಶ್ಮಿ, ಸತೀಶ್ ಸೇರಿದಂತೆ ಸಿದ್ದಗಂಗಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿದ್ದರು.



