
ಸಕಲೇಶಪುರ : ಪಟ್ಟಣದ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತವತಿಯಿಂದ ಜಿಲ್ಲಾಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮಾ ” ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಬಗೆಹರಿಸುವುದರಲ್ಲಿ ಮೊದಲನೆಯ ಸ್ಥಾನದಲ್ಲಿ ಜಿಲ್ಲೆ ಇದೆ ಜನರ ಜೀವನ ಸುಗಮವಾಗಿ ಮಾಡುವುದಕ್ಕೆ,ಜನರ ಒಳಿತಿಗಾಗಿ ಕಾಲಮಿತಿಯಲ್ಲಿ ಹಾಗೂ ಕಾನೂನು ಮಿತಿಯಲ್ಲಿ ಬಗೆಹರಿಸುವ ಕೆಲಸ ಮಾಡಬೇಕು.
ಸಾರ್ವಜನಿಕರ ಕೆಲಸವನ್ನು ಅಧಿಕಾರಿಗಳು ನಮ್ಮ ಜವಾಬ್ದಾರಿ ಎಂದು ಪ್ರಾಮಾಣಿಕವಾಗಿ ಮಾಡಬೇಕು.ಅಧಿಕಾರಿಗಳು ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಸಾರ್ವಜನಿಕರ ಸಮಸ್ಯೆ 15 ದಿನಗಲ್ಲಿ ಬಗೆಹರಿಸುವ ಕೆಲಸ ಮಾಡುತ್ತೇವೆ. ಇಲ್ಲವಾದರೆ 1 ತಿಂಗಳಲ್ಲಿ ಬಗೆಹರಿಸುವ ಕೆಲಸವನ್ನು ಖಂಡಿತ ಮಾಡುತ್ತೇನೆ.ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಛೇರಿ ಸಂಪರ್ಕಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಜನರ ಅಗತ್ಯ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಇನ್ನಿತರ ಇಲಾಖೆಗಳಿಂದ, ಸಾರ್ವಜನಿಕರಿಗೆ, ರೈತರಿಗೆ ಹಲವು ಸವಲತ್ತುಗಳ ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿಮೆಂಟ್ ಮಂಜುನಾಥ್ ತಾಲ್ಲೂಕು ಉಪ ವಿಭಾಗಾಧಿಕಾರಿಗಳಾದ ಶೃತಿ ,ಎಂ,ಕೆ,ಜಿಲ್ಲಾ ಪೋಲೀಸ್ ವರೀಷ್ಠಾಧಿಕಾರಿಗಳಾದ ಮಹಮ್ಮದ್ ಸುಜೇತ ಎಂ ಎಸ್, ಅಪರ ಜಿಲ್ಲಾಧಿಕಾರಿಳಾದ ಶಾಂತಲಾ ಕೆ.ಟಿ, ಜಿಲ್ಲಾ ಕಾರ್ಯನಿರ್ವಾಹಣ ಅಧಿಕಾರಿಯದ ಪೂರ್ಣಿಮಾ ಇದ್ದರು.




