ಸಕಲೇಶಪುರ : ತಾಲ್ಲೂಕು ಸುಂಡೇಕೆರೆ ಅಂಚೆ ಕೆಲಗಳಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದಿರುವ ಸಮಾಜ ಸೇವಕರು ಹಾಗೂ ಹೆಮ್ಮೆಯ ಕರುನಾಡ ಕಣ್ಮಣಿ ಅನು (ಅಕ್ಕ) ರವರು ಅನೇಕ ಸರ್ಕಾರಿ ಶಾಲೆಗಳಿಗೆ ಹತ್ತಾರು ಯುವಕರ ತಂಡವನ್ನು ರಚಿಸಿಕೊಂಡು ಕರ್ನಾಟಕದಾದ್ಯಂತ ಬಣ್ಣ ಬಳಿಯುವ ಕೆಲಸವನ್ನು ಹಲವಾರು ದಿನಗಳಿಂದ ಮಾಡುತ್ತಿದ್ದು ಈಗ ನಮ್ಮ ತಾಲೂಕಿನ ಕೆಲಗಳಲೆ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ

ಎರಡು ದಿನದ ಹಿಂದೆ ಹಾಸನದ ಶೌರ್ಯ ತಂಡದ ಸಂಯೋಜಕರಾದ ಸೋಮಣ್ಣರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸಂಯೋಜಕ ಮಧುವರನ್ ಅವರಿಗೆ ಅನು (ಅಕ್ಕ)ರವರಿಗೆ ಪರಿಚಯಿಸಿದರು

ಶೌರ್ಯ ಯೋಜನೆಯ ಮೇಲ್ವಿಚಾರಕರಾದ ಚಿರಂತ್ ಹಾಗೂ ತಂಡದೊಂದಿಗೆ ಮಾತನಾಡಿ ಇಂದು ಕೆಲಗಳಲೆಗೆ ಹೋಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದಿಂದ ಕೆಲವು ಗಂಟೆಗಳ ಕಾಲ ಅವರ ತಂಡದೊಂದಿಗೆ ಬಣ್ಣ ಬಳಿಯಲಾಯಿತು

ಈ ಸಂದರ್ಭದಲ್ಲಿ ಶೌರ್ಯ ತಂಡದ ಸಂಯೋಜಕ ಮಧುವರನ್ ಸ್ವಯಂ ಸೇವಕರಾದ ರವಿ ಮತ್ತು ಗ್ರಾಮದ ಯುವಕರಾದ ಕಾಂತರಾಜು ,ಪ್ರತಾಪ್,ಯೋಗೇಶ್ ,ರವಿ ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *