ಹಾಸನ: ನಗರದ ಬಿ.ಎಂ. ರಸ್ತೆ, ಕುವೆಂಪು ಬಡಾವಣೆಯಲ್ಲಿರುವ ಲಯನ್ಸ್ ಸೇವಾ ಸಂಸ್ಥೆಯ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಐ.ಜಿ. ರಮೇಶ್, ಕಾರ್ಯದರ್ಶಿಯಾಗಿ ಬಿ.ಎಂ. ರವಿಕುಮಾರ್, ಖಜಾಂಚಿಯಾಗಿ ಸಿ.ಬಿ. ನಾಗರಾಜು ಹಾಗೂ ನಿರ್ದೇಶಕರಾಗಿ ಆಯ್ಕೆಗೊಂಡಿದ್ದು, ಪದಗ್ರಹಣ ಕಾರ್ಯಕ್ರಮವನ್ನು ಅಧಿಕಾರ ಸ್ವೀಕಾರವನ್ನು ಜಿಲ್ಲಾ ಮಾಜಿ ಗೌರ‍್ನರ್ ವಿಜಯಕುಮಾರ್ ಶೆಟ್ಟಿ ನಡೆಸಿಕೊಟ್ಟರು.

ನಂತರ ವಿಜಯಕುಮಾರ್ ಶೆಟ್ಟಿ ಮಾತನಾಡಿ, ಲಯನ್ಸ್ ಎಂದರೇ ಈ ಅಕ್ಷರದಲ್ಲೆ ಸೇವೆಯ ಶಕ್ತಿಯನ್ನು ಹೊಂದಿದೆ. ಎಲ್ಲಾ ಕಡೆ ಸೇವೆಯನ್ನು ಜಾಗೃತಿಯಿಂದ ವಿಸ್ತಾರಗೊಳಿಸುವ ಮೂಲಕ ಕೆಲಸ ಮಾಡಬೇಕು. ಯಾರಿಗೆ ಅರ್ಹತೆ ಇರುತ್ತದೆ ಅವರಿಗೆ ನಾವು ಸೇವೆಯನ್ನು ಸಲ್ಲಿಸುತ್ತಿದ್ದೇವೆ.

ಸುನಾಮಿ, ಬರಗಾಲ, ಕೊರೋನಾ ಸೇರಿದಂತೆ ಇತರೆ ತುರ್ತು ಸಂದರ್ಭದಲ್ಲಿ ಲಯನ್ಸ್ ಸೇವೆ ನೀಡಿದೆ. ನಮ್ಮ ಸಂಸ್ಥೆ ಮಾಡುವ ಎಲ್ಲಾ ಕೆಲಸವು ಅರ್ಥಪೂರ್ಣವಾಗಿರುತ್ತದೆ ಎಂದರು.

ಜಗತ್ತಿನಲ್ಲಿ ಅತ್ಯುನ್ನತಕ್ಕಿಂತ ಉತ್ತಮ ಒಂದು ಇದ್ದರೇ ಅದು ಲಯನ್ಸ್ ಕ್ಲಬ್ ಎಂದು ಶ್ಲಾಘಿಸಿದರು.

ಸಮಾಜದಲ್ಲಿ ಒಂದು ಸೇವಾ ಮನೋಭಾವದ ಬೀಜ ಬಿತ್ತುವ ಮೂಲಕ ಮತ್ತೊಬ್ಬರಿಗೆ ಸೇವೆ ಮಾಡುವ ಮನಸ್ಸನ್ನು ಈ ಲಯನ್ಸ್ ತಂದುಕೊಡುತ್ತದೆ ಎಂದು ಹೇಳಿದರು.

ನಾವು ಸೇವೆಯನ್ನು ಯಾವ ರೀತಿ ನೋಡುತ್ತೇವೆ ಅದು ಸಮಾಜದಲ್ಲಿ ಒಂದು ಬದಲಾವಣೆ ತರುತ್ತದೆ. ಹೆಸರು ಮಾಡುವ ಉದ್ದೇಶದಲ್ಲಿ ಸಾಗಿದರೇ ಅದು ಸೇವೆ ಆಗುವುದಿಲ್ಲ ಸ್ವಾರ್ಥವಾಗುತ್ತದೆ ಎಂದು ಸಲಹೆ ನೀಡಿದರು.

ನೂತನ ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್ ಮಾತನಾಡಿ, ನಾನು ಲಯನ್ಸ್ ಕ್ಲಬ್ ಗೆ ಬಂದ ದಿನದಿಂದಲೇ ನನಗೆ ಲಯನ್ಸ್ ಸೇವಾಮನೋಭವವನ್ನು ತಂದುಕೊಟ್ಟಿದೆ, ಪ್ರತಿಯೊಬ್ಬರಿಗೂ ಗೌರವ ಕೊಡುವ ಸಂಸ್ಕಾರ ತಿಳಿಸಿದೆ. ಒಂದು ಸಮುದ್ರದ ಒಂದು ದಡದಿಂದ ಇನ್ನೊಂದು ದಡಕ್ಕೆ ದಾಟ ಬೇಕಾದರೇ ಒಬ್ಬರಿಂದ ಸಾಧ್ಯವಿಲ್ಲ. ಮತ್ತೊಬ್ಬರ ಸಹಾಯದ ಅವಶ್ಯಕತೆ ಇರುತ್ತದೆ. ಲಯನ್ಸ್ ಎಂಬುದು ಸಮಾಜದಲ್ಲಿ ಸೇವೆ ಸಲ್ಲಿಸು ಎಂದರ್ಥ. ೨೦೨೪-೨೫ನೇ ಸಾಲಿಗೆ ನನ್ನನ್ನು ಲಯನ್ಸ್ ಕ್ಲಬ್ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದ್ದು, ಉತ್ತಮ ಸೇವೆ ಮಾಡಲು ಎಲ್ಲಾ ಹಿರಿಯರು ನನಗೆ ಸಹಕಾರ ಕೊಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಹೆಚ್ಚು ಅಂಕ ಪಡೆದ ರಕ್ಷಿತಾ ಹಾಗೂ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಗಗನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇನ್ನು ಸರಕಾರಿ ಶಾಲೆಗೆ ಪುಸ್ತಕ, ಧನ ಸಹಾಯ ಮಾಡಿದರು. ಲಯನ್ಸ್ ಕ್ಲಬ್ ಗೆ ಜನರೇಟರ್ ನೀಡಿದ ವಿಶಾಲಾಕ್ಷಿ ದಂಪತಿಯನ್ನು ಸನ್ಮಾಸಿ ಗೌರವಿಸಿದರು.

ಇದೆ ವೇಳೆ ಹೊಸ ಲಯನ್ಸ್ ಸದಸ್ಯರನ್ನು ಬರಮಾಡಿಕೊಂಡರು.

ಇದೆ ವೇಳೆ ಲಯನ್ಸ್ ಕ್ಲಬ್ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನೂತನ ಅಧ್ಯಕ್ಷರಿಗೆ ಅಧಿಕಾರ ನೀಡಿದ ಹೆಚ್.ಕೆ. ನಾಗೇಶ್, ಕಾರ್ಯದರ್ಶಿ ಸಿ.ಕೆ. ಕಿರಣ್, ಖಜಾಂಚಿ ಬಿ.ಎಂ. ರವಿಕುಮಾರ್, ಲಿಯೋ ಕ್ಲಬ್ ನೂತನ ಅಧ್ಯಕ್ಷರಾದ ಬಿ.ಐ. ಸುವರ್ಚಲಾ, ಕಾರ್ಯದರ್ಶಿ ಮೊನಲಿಗೌಡ, ಖಜಾಂಚಿ ಡಿ.ಜಿ. ಚಿರಂತನಾ, ನೂತನ ಲಿಯೋ ಎಂ.ಸಿ.ಇ. ಅಧ್ಯಕ್ಷ ಬಿ.ಪಿ. ಶ್ರೇಯಾಂಕ್, ಪ್ರಿಯ ಕಿರಣ್, ಕಾರ್ಯದರ್ಶಿ ಕೆ.ಎಸ್. ಲಕ್ಷಣ್, ಖಜಾಂಚಿ ನಿಖಿಲ್ ಪ್ರಭು, ಮಾಜಿ ಗೌರ‍್ನರ್ ಬಿ.ವಿ. ಹೆಗಡೆ, ಹೆಚ್.ಎಸ್. ಮಂಜುನಾಥ್ ಮೂರ್ತಿ, ವಲಯ ಅಧ್ಯಕ್ಷೆ ರೂಪ ಆನಂದ್, ಪ್ರಾಂತೀಯ ಅಧ್ಯಕ್ಷ ಕೆ.ಜೆ. ನಾಗರಾಜ್, ಇತರರು ಉಪಸ್ಥಿತರಿದ್ದರು.

ಪ್ರೇಮ ಸತ್ಯನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *