
ಸಕಲೇಶಪುರ : ತಾಲೂಕಿನ ಆನೆಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಸತ್ತಿಗಲ್ ಗ್ರಾಮದ ಜೈನಬಿ ಬಿನ್ ಹಸೈನರ್ ರವರ ಮನೆ ಬಾರಿ ಗಾಳಿ ಮಳೆಯಿಂದಾಗಿ ಸೀಟು ಹಂಚು ಹಾರಿ ಹೋಗಿ ಗೋಡೆ ಮಳೆ ನೀರಿನಿಂದ ಸಿತಲ ಗೊಂಡು ಕುಸಿದಿದೆ
ಗೋಡೆ ಕುಸಿತದ ಪರಿಣಾಮ ರಿಹಾನ್ ಎಂಬ 16 ವಯಸ್ಸಿನ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಗೂ ಮನೆಯಲ್ಲಿದ್ದ ಪೀಠೋಪಕರಣಗಳು ಹಾನಿಗೊಂಡಿದೆ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ವೀರೇಶ್, ಹಾಗೂ ಗ್ರಾಮ ಲೆಕ್ಕಾದಿಕಾರಿಗಳಾದ ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಮ ದೇವರಾಜ್, ವಿರುಪಾಕ್ಷ, ಗ್ರಾಮಸ್ಥರು, ಇತರರು ಹಾಜರಿದ್ದರು.


