ಸಕಲೇಶಪುರ: ಲಯನ್ಸ್ ಜಿಲ್ಲೆ ವತಿಯಿಂದ ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ನವೀಕರಣಗೊಳಿಸಿದ್ದ ಮುಕ್ತಿ ಧಾಮವನ್ನು ಸ್ಥಳೀಯ ಲಯನ್ಸ್ ಸಂಸ್ಥೆ ವತಿಯಿಂದ ಗಿಡ ಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಲಾಯಿತು.

ಲಯನ್ಸ್ ನಿಕಟಪೂರ್ವ ರಾಜ್ಯಪಾಲ ಸಂಜೆತ್ ಶೆಟ್ಟಿ,ಪ್ರಾಂತೀಯ ಅಧ್ಯಕ್ಷ ರಾಬಿ ಸೋಮಯ್ಯ,ಪ್ರಾಂತೀಯ ರಾಯ ಭಾರಿ ಎನ್.ಎಸ್ ವಿಠಲ್, ಡಾ. ನವೀನ್ ಚಂದ್ರ ಶೆಟ್ಟಿ,ಸಂಸ್ಥೆ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿ ವೆಂಕಟೇಶ್, ಖಜಾಂಜಿ ಪ್ರೇಮನಾಥ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ,ಡಾ. ನವೀನ್ ಚಂದ್ರ ಶೆಟ್ಟಿ, ಸೀನಪ್ಪ ಆಳ್ವ ಅಬ್ದುಲ್ ಖಾದರ್, ಮೀನಾಕ್ಷಿ ಖಾದರ್, ದುರ್ಗೇಶ್, ಬಸವರಾಜ್, ಮುಕ್ತಿ ಧಾಮ ಟ್ರಸ್ಟಿನ ಕಾರ್ಯದರ್ಶಿ ಉಮೇಶ್ ಸಣ್ಣ ಕೈಕಾರಿಗೋದ್ಯಮಿಗಳ ಸಂಘದ ಯೂಸೂಫ್ ಮುಂತಾದವರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *