
ಬೇಲೂರು : ವ್ಯಾಪಾಕ ಗಾಳಿ ಮಳೆ ಹಿನ್ನಲೆ ಸಕಲೇಶಪುರ – ಬೇಲೂರು ರಸ್ತೆ ಮಾರ್ಗದಲ್ಲಿ ಮರಬಿದ್ದ ಪರಿಣಾಮ ಸುಮಾರು ಅರ್ದ ಗಂಟೆಗೂ ಹೆಚ್ಚು ಕಾಲ ಸಂಚಾರ ಬಂದ್ ಅದ ಪ್ರಸಂಗ ನಡೆಯಿತು
ರಸ್ತೆಯ ಪಕ್ಕದಲ್ಲಿ ಇದ್ದಂತ ಬುಡಸಮೇತ ೫ ಮರಗಳು ಬಿದ್ದು ವಿದ್ಯುತ್ ಕಂಬಗಳು ರಸ್ತೆಯ ಮೇಲೆ ಬಿದ್ದ ಹಿನ್ನಲೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಕಲೇಶಪುರ ಹಾಗೂ ಬೇಲೂರು ರಸ್ತೆ ಸಂಚಾರ ಬಂದ್ ಆಗಿತ್ತು.
ಶಿರಾಡಿ ಬಂದ್ ಆದ ಹಿನ್ನಲೆಯಲ್ಲಿ ಈ ಮಾರ್ಗವಾಗಿ ಹೆಚ್ಚು ವಾಹನಗಳು ಓಡಾಡುತ್ತಿರುವ ಹಿನ್ನಲೆಯಲ್ಲಿ ಮರಗಳನ್ನು ತೆರವುಗೊಳಿಸಲು ಕೆಇಬಿ ಇಲಾಖೆ ಹರಸಾಹಸ ಪಟ್ಟು ತೆರವುಗೊಳಿಸುತ್ತಿದ್ದರು ಆದರೂ ಸಹ ವಾಹನ ದಟ್ಟಣೆ ಹೆಚ್ಚಿದ ಹಿನ್ನಲೆಯಲ್ಲಿ ಸುಮಾರು ಅರ್ದ ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಆಗಿತ್ತು.
ಸಾರ್ವಜನಿಕರ ಸಹಕಾರ ಪಡೆದು ಎಲ್ಲಾ ಕಂಬಗಳನ್ನು ಹಾಗೂ ಮರಗಳನ್ನು ತೆರವುಗೊಳಿಸಲಾಯಿತು.


