ಅರೇಹಳ್ಳಿ: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಕೆಸಗೋಡು ಆಲೂರು ಮುಖ್ಯ ರಸ್ತೆಯ ಹೊಳಲು ಗಡಿಯ ಗ್ರೀನ್ ಹುಡ್ ಎಸ್ಟೇಟ್ ಬಳಿ ಬೃಹತ್ ಕಾಡು ಜಾತಿಯ ಮರವು ರಸ್ತೆಗೆ ಗುರುವಾರ ಸಂಜೆ ಮುಖ್ಯರಸ್ತೆ ಅಡ್ಡಲಾಗಿ ಬಿದ್ದು ವಾಹನ ಸವಾರರಿಗೆ ತೀವ್ರತರದ ತೊಂದರೆ ಉಂಟಾದ ಘಟನೆ ನಡೆದಿದೆ.

ಶುಕ್ರವಾರ ಬೆಳಗ್ಗೆ ಹಾಸನದಿಂದ ಆಲೂರು -ಕೆಸಗೋಡು- ಬಿಕ್ಕೋಡು ಮಾರ್ಗವಾಗಿ ಬರುವ ಸಾರಿಗೆ ಸಂಸ್ಥೆ ಬಸ್ ಮರ ತೆರವುಗೊಳಿಸದ ಪರಿಣಾಮ ಕೆಸಗೋಡಿನಿಂದ ವಾಪಸ್ ಹೋಗಿದ್ದು ಬಿಕ್ಕೋಡು ಹಾಗೂ ಸುತ್ತಮುತ್ತಲ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗಿತ್ತು.

ಘಟನೆ ನಡೆದು ಸುಮಾರು ೨೦ ಗಂಟೆ ಕಳೆದರೂ ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆ, ಅರಣ್ಯ ಇಲಾಖೆಯಾಗಲಿ, ಸ್ಥಳೀಯ ಪಂಚಾಯತ್ ಆಗಲಿ ಇತ್ತ ಕಡೆ ಗಮನ ಹರಿಸದಿರುವುದನ್ನು ಕಂಡ ಸ್ಥಳೀಯ ಕೆಸಗೋಡಿನ ಲೋಕೇಶ್ ಮತ್ತು ತಂಡದವರು ಒಟ್ಟಾಗಿ ಮರವನ್ನು ತುಂಡರಿಸಿ ವಾಹನಗಳು ಓಡಾಡಲು ಅನುವು ಮಾಡಿಕೊಟ್ಟರು.

ಮರ ತೆರವು ಕಾರ್ಯಾಚರಣೆಯಲ್ಲಿ ಕೆಸಗೋಡು ಶಾಲಾ ಶಿಕ್ಷಕ ಸಂಪತ್ ಗ್ರಾಮಸ್ಥರಾದ ಗೋವಿಂದ, ಪಾಪ, ಕಿಟ್ಟಿ,ಹೊಳಲು ಯೋಗೇಂದ್ರ ಗೌಡ, ನೂತನ್ ಹಾಗೂ ಇನ್ನೂ ಮುಂತಾದವರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *