
ಚನ್ನರಾಯಪಟ್ಟಣ:ಗುರು ಪೂರ್ಣಿಮೆ ಪ್ರಯುಕ್ತ ಸದ್ಗುರು ಸಾಯಿ ಸಿದ್ಧಾಶ್ರಮದಲ್ಲಿ ಭಾನುವಾರ ವಿವಿಧ ಹೋಮ ಹಾಗೂ ಪೂಜೆಗಳನ್ನು ಏರ್ಪಡಿಸಲಾಗಿದೆ ಎಂದು ಸಿದ್ದಾಶ್ರಮದ ಶ್ರೀ ಗುರುಮೂರ್ತಿ ಗುರೂಜಿ ತಿಳಿಸಿದ್ದಾರೆ
ತಾಲೂಕಿನ ಹಿರೀಸಾವೆ ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ಶ್ರೀ ಸಾಯಿ ಮಂದಿರದಲ್ಲಿ ಪತ್ರಕರ್ತರ ಉದ್ದೇಶಿಸಿ ಅವರು ಮಾತನಾಡಿದ ಅವರು ಭಾನುವಾರ ಬೆಳಗ್ಗೆ ಗಂಗಾಪೂಜೆ, ಗಣಹೋಮ ವ್ಯಾಸ ಪೂಜೆ, ಸದ್ಗುರು ಪೂಜೆ, ಭಿಕ್ಷಾವಂದನೆ ಮತ್ತು ಕುಂಭಾಭಿಷೇಕ ಸೇರಿದಂತೆ ಹಲವು ಪೂಜೆಗಳು ನಡೆಯಲಿವೆ.
ಮದ್ಯಾಹ್ನದ ಆರತಿ, ಸಾಯಿಭಜನೆ ಮತ್ತು ಸಂಜೆ ಆರತಿ ನಡೆಯಲಿದೆ. ಭಕ್ತರ ಸಹಕಾರದಿಂದ ಈ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿಸದ್ಗುರು ಸಾಯಿ ಮಂದಿರದ ಯೋಗಿ ಶಿವಾನಂದ ಗುರೂಜಿ ಹಾಜರಿದ್ದರು.
