ಸಕಲೇಶಪುರ : ತಾಲ್ಲೂಕಿನ ಮಲೆನಾಡು ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಬೀಕರ ಮಳೆಗೆ ಮರಗಳು ಧರೆಗೆ ಉರುಳುವಂತೆ ಬೀಸುತ್ತಿರುವ ಗಾಳಿಗೆ ಜನ ಜೀವನದ ಅಸ್ತವ್ಯಸ್ತವಾಗಿದೆ.

ಇದರ ಜೊತೆಗೆ ಕಾಡಾನೆ ಹಾಗೂ ಕಾಡು ಪ್ರಾಣಿಗಳ ಹಾವಳಿ ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಕ್ಕೆ ತೊಂದರೆ ಕೊಡುತ್ತಿರುವ ಹಳೇ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ.

ಪ್ರತೀ ದಿನ ಶಾಲಾ, ಕಾಲೇಜುಗಳಿಗೆ ದೂರ ಊರುಗಳಿಗೆ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ.

ಇತ್ತೀಚೆಗೆ ಕಾಡಾನೆಗಳು ಸಂಜೆ 6 ಗಂಟೆಯ ನಂತರ ರಸ್ತೆಯಲ್ಲೇ ಓಡಾಡುತಿದ್ದು ಬಸ್ಸಿನಲ್ಲಿ ಓಡಾಡುವ ಜನ ಸಾಮಾನ್ಯರಿಗೆ ತೊಂದರೆ ಉಂಟಾಗಿದೆ.

ಸಾರಿಗೆ ಇಲಾಖೆಗೆ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಯಾವುದೇ ಅಪಾಯಗಳು ಆಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಯೋಗೇಶ್ ಪಟೇಲ್ ಅತ್ತಿಹಳ್ಳಿ ವಿನಂತಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *