ಸಕಲೇಶಪುರ : ತಾಲೂಕಿನಲ್ಲಿ ಮತ್ತೆ ವರುಣಾರ್ಭಟ ಹೆಚ್ಚಾಗಿದ್ದು ಮತ್ತೊಮ್ಮೆ ಶ್ರೀ ಹೊಳೆಮಲ್ಲೇಶ್ವರ ಸ್ವಾಮಿ ಅವರ ಮಟ್ಟಿಲುಗಳ ವರೆಗೆ ಹೇಮಾವತಿ ನದಿಯ ನೀರು ಹರಿದು ಬಂದಿದ್ದು ಇದೆ ರೀತಿಯಲ್ಲಿ ಮಳೆ ಮತ್ತಷ್ಟು ಮುಂದುವರೆದರೆ ಗರ್ಭಗುಡಿಯವರೆಗೆ ನೀರು ಬರುವ ಸಾಧ್ಯತೆ ಹೆಚ್ಚಿದ್ದು ಪಟ್ಟಣದ ಅಜಾದ್ ರಸ್ತೆ ,ಮಹೇಶ್ವರಿ ನಗರ ( ಕೊಪ್ಪಲು), ಹಾಗೂ ಹಳೆಸಂತ್ವೇರಿಯ ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಬರುವ ಸಾಧ್ಯತೆ ಹೆಚ್ಚಿದ್ದು ಅಲ್ಲಿನ ನಿವಾಸಿಗಳು ರಾತ್ರಿಯ ವೇಳೆಯಲ್ಲಿ ಮನೆಯಲ್ಲಿ ತಂಗುವುದು ಸುರಕ್ಷಿತವಲ್ಲ ಎಂದು ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶೃತಿ ಅವರು ತಿಳಿಸಿದ್ದಾರೆ.

ಈಗಾಗಲೆ ಹೇಮಾವತಿ ದಂಡೆಯ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಶ್ರಯಕ್ಕೆ ಅವಕಾಶ ಕಲ್ಪಿಸಲಾಗಿದ್ದು ಬೇಜವಾಬ್ದಾರಿ ತೋರದೆ ಸುರಕ್ಷಿತ ಸ್ಥಳದಲ್ಲಿ ಇರಬೇಕೆಂದು ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *