
ಸಕಲೇಶಪುರ : ತಾಲೂಕಿನ ಹೆತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆತ್ತೂರು ಗ್ರಾಮದ ಬಿ ಬ್ಲಾಕ್ ಪರಿಶಿಷ್ಟ ಜಾತಿ ಹಾಗೂ ಇತರೆ ಸಮುದಾಯದವರು ವಾಸವಾಗಿರುವ ಬಡಾವಣೆಗೆ ಕಳೆದ ಒಂದು ವಾರದಿಂದ ಕುಡಿಯುವ ನೀರು ಬಿಡದೆ ಗ್ರಾಮಸ್ಥರು ಮಳೆ ನೀರನ್ನು ಅವಲಂಬಿಸಿಕೊಂಡು ಕುಡಿಯಲು ಹಾಗೂ ಅಡಿಗೆ ಇತರ ಚಟುವಟಿಕೆ ಗಳಿಗೆ ಬಳಸುವಂತಹ ಪರಿಸ್ಥಿತಿ ಎದುರಾಗಿದೆ.
ಮಳೆ ನೀರು ಕುಡಿದು ಕೆಲವರಿಗೆ ಆರೋಗ್ಯ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆ ಇರುವ ಕಾರಣ, ಕೂಡಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಡಾವಣೆಗೆ ನೀರು ಪೂರೈಸಬೇಕು ಎಂದು ಮಹಿಳಾ ಸಾಮಾಜಿಕ ಹೋರಾಟಗಾರ್ತಿ, ಪ್ರಮೀಳಾ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ, ದೇವಕಿ, ಜಯಲಕ್ಷ್ಮಿ ರೇಖಾ, ಸೇರಿದಂತೆ ಗ್ರಾಮಸ್ಥರು ಇತರರು ಹಾಜರಿದ್ದರು.



