ಬೇಲೂರು : ತಾಲೂಕಿನ ಪ್ರವಾಸಿ ತಾಣದಲ್ಲಿ ಒಂದಾದ ಯಗಚಿ ಜಲಾಶಯಕ್ಕೆ ಹೊಂದಿಕೊಂಡಂತ ಪ್ರದೇಶದಲ್ಲಿ ಬಾರಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಯಗಚಿ ಜಲಾಶಯ ಭರ್ತಿಯಾಗಿದ್ದು ೧೫೦೦ ನೀರನ್ನು ಹೊರಬಿಡುತ್ತಿದ್ದು ಇಷ್ಟೇ ಪ್ರಮಾಣದ ನೀರು ಜಲಾಶಕ್ಕೆ ಹರಿದು ಬರುತ್ತಿರುವುದರಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಇದೇ ರೀತಿ ಮತ್ತೆ ಮಳೆ ಮುಂದುವರೆದರೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡುವುದರಿಂದ ಯಗಚಿ ಜಲಾಶಯದ ಕೆಳಭಾಗದಲ್ಲಿ ಇರುವಂತವರು ಮುಂಜಾಗೃತರಾಗಿರಬೇಕೆಂದು ಯಗಚಿ ಜಲಾಶಯ ಸಹಾಯಕ ಇಂಜಿನಿಯರ್ ತಿಳಿಸಿದರು.

ಮೂಲಸೌಕರ್ಯ ಒದಗಿಸುವಂತೆ ಕರವೇ ಪ್ರವೀಣ್ ಶಟ್ಟಿ ಬಣದಿಂದ ಆಗ್ರಹ

ತಾಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾದ ಯಗಚಿ ಜಲಾಶಯಕ್ಕೆ ಶ್ರೀ ಚನ್ನಕೇಶವ ದೇಗುಲಕ್ಕೆ ಬಂದಂತ ಪ್ರವಾಸಿಗರು ಹೆಚ್ಚಾಗಿ ಜಲಾಶಯ ವೀಕ್ಷಣೆಗೆ ಬರುತ್ತಾರೆ.ಬಂದಂತ ಪ್ರವಾಸಿಗರಿಗೆ ಯಾವುದೆ ರೀತಿಯ ಮೂಲಭೂತ ಸೌಕರ್ಯಗಳಿಲ್ಲದೆ ಜಲಾಶಯ ವೀಕ್ಷಣೆ ಮಾಡಿ ಹೋಗುತ್ತಿದ್ದಾರೆ.

ಇದರಿಂದ ಪ್ರವಾಸೋದ್ಯಮ ಅಭಿವೃದ್ದಿಯಾಗುವುದಾದರೂ ಹೇಗೆ ಅಲ್ಲದೆ ಸುಮಾರು ೧೫ ವರ್ಷಗಳಿಂದ ಬಂದಂತ ಎಲ್ಲಾ ಶಾಸಕರಿಗೆ ಇಲ್ಲಿ ಸುಮಾರು 250 ಎಕರೆ ಜಲಾಶಯಕ್ಕೆ ಹೊಂದಿಕೊಂಡತ ಖಾಲಿ ಜಾಗ ಇದ್ದರೂ ಬಂದಂತ ಪ್ರವಾಸಿಗರಿಗೆ ಶೌಚಾಲಯದ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಮ್ಮ ಸಂಘಟನೆಯಿಂದ ಮನವಿ ಮಾಡಿದ್ದೇವೆ .

ಆದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.ಇಲ್ಲಿಯ ಯಗಚಿ ಜಲಾಶಯ ಸಿಬ್ಬಂದಿಗಳಿಗೂ ಸಹ ಇಲ್ಲಿ ಯಾವುದೇ ರೀತಿಯ ವಿಶ್ರಾಂತಿ ಕೊಠಡಿ ,ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿ.ಈಗಾಗಲೇ ನಮ್ಮ ಸ್ಥಳೀಯ ಶಾಸಕ ಹೆಚ್ ಕೆ ಸುರೇಶ್ ಅವರು ಈಗ ನಡೆಯುತ್ತಿರುವ ಸದನದಲ್ಲಿ ಪ್ರವಾಸೋದ್ಯಮದ ಬಗ್ಗೆ ಚರ್ಚಿಸಿದ್ದು ಅದರಂತೆ ಯಗಚಿ ಜಲಾಶಯಕ್ಕೆ ಹೆಚ್ಚಿನ ಅನುದಾನ ತಂದು ಕೆ ಆರ್ ಎಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು

ಇದರಿಂದ ಇಲ್ಲಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗುವುದರಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಸಹ ಅನುಕೂಲವಾಗುತ್ತದೆ .ಕೂಡಲೇ ಇದರ ಬಗ್ಗೆ ಹೆಚ್ಚಿನ ಕಾಳಜಿಯನ್ನು ನಮ್ಮ ಶಾಸಕರು ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರವೇ ಪೃವಿಣ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್,ಸತೀಶ್,ಸಾಂಸ್ಕೃತಿಕ ಘಟಕದ ಅಧ್ಯಕ್ಷ ಗಣೇಶ್,ರವಿಹೊಳ್ಳ,ಶಿವರಾಜ್,ಆರಾಧ್ಯ,ಲೋಹಿತ್,ಸುನೀಲ್ ,ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *