ಸಕಲೇಶಪುರ :- ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕೆರೆಗೆ ಮಹಿಳೆಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ.

ಕುಶಾಲನಗರದ ನಿವಾಸಿಯಾದ ಗೌರಮ್ಮ(60) ಮೃತ ಮಹಿಳೆ ಸಂಜೆ ಸುಮಾರು 4-30 ರ ಸಮಯದಲ್ಲಿ ಈ ಕೆರೆಯ ಪಕ್ಕದಲ್ಲಿ ತಿರುಗಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು, ಸ್ವಲ್ಪ ಸಮಯದಲ್ಲಿ ಮಹಿಳೆಯು ಕಾಣಿಸಿಲ್ಲ. ಸ್ಥಳೀಯರು ಕೆರೆಯ ದಡದಲ್ಲಿ ನೋಡಿದಾಗ ಕಾಲುಂಗುರ ಹಾಗೂ ಆಧಾರ್ ಕಾರ್ಡ್ ಮಾತ್ರ ಸಿಕ್ಕಿದ್ದು ಮಹಿಳೆ ಪಟ್ಟಣದ ಕುಶಾಲನಗರ ನಿವಾಸಿ ಗೌರಮ್ಮ ಎಂದು ತಿಳಿದು ಬಂದಿದೆ.

ಗೌರಮ್ಮ ಕೆರೆಗೆ ಹಾರಿರಬಹುದೆಂದು ಸ್ಥಳೀಯರ ಅನುಮಾನದ ಪ್ರಕಾರ ಅಗ್ನಿಶಾಮಕ ದಳದವರನ್ನು ಸಂಪರ್ಕಿಸಿದ್ದಾರೆ.

ಶೋಧನಾ ಕಾರ್ಯ ನಡೆಸಿದ ಅಗ್ನಿಶಾಮಕ ದಳದವರು ಶವವನ್ನು ಹೊರತೆಗೆದಿದ್ದು ಪ್ರಕರಣ ಸಕಲೇಶಪುರ ನಗರ ಠಾಣೆಯಲ್ಲಿ ದಾಖಲಾಗಿದ್ದು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *