
ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿ ಹಿರಿಗರ್ಜೆ ಕೊಪ್ಪಲು ಗ್ರಾಮದಲ್ಲಿ ಟೋಲ್ ಮನೆಯಿಂದ ಹಿರಿಗರ್ಜೆ ಹೋಗುವ ರಸ್ತೆ ಸಮೀಪ ರೈತರೊಬ್ಬರ ಗದ್ದೆಯಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ಅತಿಯಾದ ಮಳೆಯಿಂದ ಕೊಚ್ಚಿಹೋದ ಘಟನೆ ನಡೆದಿದೆ
ವಿಷಯ ತಿಳಿದ ಸಂಬಂಧಪಟ್ಟ ಅಧಿಕಾರಿಗಳು ಯಾರು ಇತ್ತ ಗಮನ ಹರಿಸದ ಕಾರಣ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


