
ಬೇಲೂರು : ಬಸ್ ನಿಲ್ದಾಣ ವನ್ನು ಬದಲಿ ವ್ಯವಸ್ಥೆ ಮಾಡಿ ಬೇರೆ ಕಡೆ ಹೈಟೆಕ್ ಮಾದರಿಯಲ್ಲಿ ನಿರ್ಮಾಣಮಾಡಲು ಶಾಸಕ ಹೆಚ್ ಕೆ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗು ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಪೂರ್ವ ಭಾವಿ ಸಭೆಯನ್ನು ದಾಸೊಹ ಭವನದಲ್ಲಿ ಕರೆಯಲಾಗಿತ್ತು.
ಆದರೆ ಶಾಸಕರು ಕೆಲಸದ ನಿಮಿತ್ತ ಎರಡು ಗಂಟೆಗಳ ಕಾಲ ತಡವಾಗಿ ಬಂದಿದ್ದಕ್ಕೆ ಸಂಘಟನೆಯ ಹಾಗು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.
ಹೊರ ಹೋಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸದೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಖಾಲಿ ಜಾಗವನ್ನು ಪಡೆಯುವ ಮೂಲಕ ಇಲ್ಲಿಯೇ ಅಭಿವೃದ್ಧಿ ಪಡಿಸಬೇಕೆಂದು ಪ್ರತಿಭಟನೆ ನಡೆಸಿದರು.
ಪ್ರಗತಿ ಪರ ಸಂಘಟನೆಯ ಕರವೇ ಅಧ್ಯಕ್ಷ ಚಂದ್ರು ,ಪ್ರವೀಣ್ ಶೆಟ್ಟಿ ಬಣದ ಭೋಜೇಗೌಡ,ಜಯಕರ್ನಾಟಕ ಸಂಘಟನೆಯ ರಾಜು ಮತ್ತು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್,ಸ್ವಾಮೀಗೌಡ,ಹಾಗೂ ಸಾಮಾಜಿಕ ಹೋರಾಟಗಾರ ವೆಂಕಟೇಶ್ ಅವರ ನೇತೃತ್ವದಲ್ಲಿ ನೂರಾರು ಜನರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕರೆವೇ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ಭೋಜೇಗೌಡ ಮಾತನಾಡಿ ಬೇಲೂರು ಪ್ರವಾಸಿತಾಣಕ್ಕೆ ಹೊಂದಿಕೊಂಡಂತೆ ಇರುವಂತಹ ಹಳೆ ಬಸ್ ನಿಲ್ದಾಣವನ್ನು ತೆರವು ಮಾಡಿ ರಾಯಪುರದ ಬಳಿ ನಿಲ್ದಾಣವನ್ನು ಮಾಡಲು ಹೊರಟಿರುವುದು ಇದಕ್ಕೆ ತಾಲೂಕಿನ ಜನತೆಯ ವಿರೋಧ ಇದೆ.ಆದರೆ ಈ ಪ್ರವಾಸಿ ಕೇಂದ್ರಕ್ಕೆ ಹತ್ತಿರ ದಲ್ಲಿ ನಿಲ್ದಾಣ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.
ನೀವು ಮಾಡುವ ಅಭಿವೃದ್ಧಿ ಕೆಲಸಗಳಿಗೆ ಹಾಗೂ ಭ್ರಷ್ಟಾಚಾರ ಮುಕ್ತ ತಾಲೂಕನ್ನು ಮಾಡಲು ಹೊರಟಿರುವುದಕ್ಕೆ ನಮ್ಮ . ಸಂಘಟನೆಗಳ ಸಂಪೂರ್ಣ ಸಹಕಾರವಿದೆ.ಆದರೆ ಇಲ್ಲಿಯ ಬಸ್ ನಿಲ್ದಾಣ ನಾಲ್ಕು ಕಿಮೀ ಹೊರಗಡೆ ಹಾಕಿದರೆ ಸಾರ್ವಜನಿಕರಿಗ ಹಾಗೂ ವಿದ್ಯಾರ್ಥಿಗಳಿಗೆ,ವಾಣಿಜ್ಯ ವ್ಯಾಪಾರಗಳಿಗೆ ,ಆಸ್ಪತ್ರೆಗೆ ತೆರಳುವವರಿಗೆ ತುಂಬಾ ತೊಂದರೆಯಾಗುತ್ತದೆ.ಕೂಡಲೆ ಅದನ್ನು ಕೈಬಿಟ್ಟು ಹಳೆ ಬಸ್ ನಿಲ್ದಾಣ ಪಕ್ಕದಲ್ಲಿರುವ ವೇಲಾಪುರಿ ಹೊಟೇಲ್ ಬಳಿಯ ಹಿಂಭಾಗದ ಜಾಗ ಹಾಗೂ ಪ್ರವಾಸಿ ಮಂದಿರದ ಜಾಗ ಪಡೆದು ಅಭಿವೃದ್ಧಿ ಪಡಿಸಲಿ ಅದ ಬಿಟ್ಟು ಇಲ್ಲಿಂದ ಹಳೆ ನಿಲ್ದಾಣವನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಎಂದರು.
ನಂತರ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಸ್ವಾಮೀಗೌಡ ಮಾತನಾಡಿ ಸಾಕಷ್ಟು ವರ್ಷಗಳ ಸಂಘಟನೆಗಳ ಹೋರಾಟದ ಫಲವಾಗಿ ಒಂದು ಬಸ್ ನಿಲ್ದಾಣ ವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ.ಇದು ಉಪಯೋಗವಾಗುತ್ತಿದೆ.
ಈ ಹಿಂದೆ ಬಸ್ ನಿಲ್ದಾಣ ಕಿರಿದಾಗಿದೆ ಎಂದು ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಹಿಂದಿನ ಶಾಸಕರಾದ ರುದ್ರೇಶ್ ಗೌಡ ಅವರು ಇಲ್ಲಿನ ಜಾಗವನ್ನು ಗುರ್ತಿಸಿ ಅಗಲೀಕರಣ ಮಾಡಲು ಮುಂದಾಗಿದ್ದರು.ಆದರೆ ಸರ್ಕಾರ ಬಿದ್ದ ನಂತರ ಅದು ನಿಂತಿತ್ತು.ಹಿಂದಿನ ಶಾಸಕ ಕೆ ಎಸ್ ಲಿಂಗೇಶ್ ಅವರು ಸಹ ಅಭಿವೃದ್ಧಿ ಪಡಿಸಲು ಹೋರಾಟ ಮಾಡಿ ಹಣ ತಂದು ನವೀಕರಣ ಮಾಡಿದ್ದರು.
ಆದರೆ ಈಗಿನ ಶಾಸಕರು ಕೆರೆಕಟ್ಟೆಗಳನ್ನು ಮುಚ್ಚಿ ಬಸ್ ನಿಲ್ದಾಣ ಮಾಡಲು ಹೊರಟಿರುವುದು ಎಷ್ಟು ಸರಿ ಅಲ್ಲದೆ ಸಭೆಗೆ ತಡವಾಗಿ ಬಂದಿರುವುದಲ್ಲದೆ ಯಾರೊ ನಾಲ್ಕು ಜನ ಹಿಂಭಾಲಕರನ್ನಿಟ್ಟುಕೊಂಡು ಸಂಘಟನೆಗಳ ಮೇಲೆ ದಬ್ಬಾಳಿಕೆ ಮಾಡಲು ಬರುವುದು ಅವರ ಘನತೆಗೆ ತಕ್ಕದಲ್ಲ.ಇವರ ಪುಂಡಾಟಿಗೆ ಗೂಂಡಾಗಿರಿಗೆ ಇಲ್ಲಿ ಎದುರುವಂತಹ ಯಾರು ಜನರಿಲ.
ಈ ಹಿಂದೆ ಪುಂಡಾಟಿಗೆಕೆ ಮಾಡಿದವರಿಗೆ ತಾಲೂಕಿನ ಜನತೆ ಹಾಗು ಸಂಘಟನೆಗಳು ಯಾವ ರೀತಿ ತಕ್ಕ ಶಾಸ್ತಿ ಮಾಡಿದೆ ಎಂಬುವುದನ್ನು ಅರಿಯಬೇಕು.ಯಾರೊ ಬುದ್ದಿಗೇಡಿ ನಾಲ್ಕು ಜನರನ್ನು ಕರೆದುಕೊಂಡು ಬಂದು ಸಾರ್ವಜನಿಕರ ಹಾಗು ಸಂಘಟನೆಗಳ ಮೇಲೆ ದಬ್ಬಾಳಿಕೆ ಮಾಡಲು ಬಂದರೆ ನಾವು ಎಲ್ಲಿ ಅಲ್ಲಿ ಉತ್ತರ ಕೊಡುತ್ತೇವೆ.
ಸಂಘ ಸಂಸ್ಥೆಗಳ ಜೊತೆ ಹಾಗೂ ಸಾರ್ವಜನಿಕರ ಜೊತೆಯಾದಾಗ ಮಾತ್ರ ಅಭಿವೃದ್ಧಿ ಯಾಗುತ್ತದೆ.ಯಾರೊ ರಿಯಲ್ ಎಸ್ಟೇಟ್ ಅವರ ಉಪಯೋಗಕ್ಕಾಗಿ ಕರೆತಂದರೆ ಇದಕ್ಕೆ ಉತ್ತರವನ್ನು ಮುಂದೆ ಕೊಡುತ್ತೇವೆ ಎಂದರು.
ಶಾಸಕರು ಈ ಸಂದರ್ಭದಲ್ಲಿ ಬಂದರೂ ಸಹ ಸಂಘಟನೆಗಳು ಅವರ ವಿರುದ್ಧ ಪ್ರತಿಭಟನೆ ನಡೆಸಿದರಲ್ಲದೆ ಅವರ ಸಭೆಯನ್ನು ಬಹಿಷ್ಕರಿಸಿ ಯಾರೂ ಸಹ ಸಂಘಟನೆಯ ಪ್ರಮುಖರು ಹಾಗು ಸಾರ್ವಜನಿಕರು ಸಭೆಗೆ ಹಾಜರಾಗಲಿಲ್ಲ.
ಈ ವೇಳೆ ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್,ಜಯಕರ್ನಾಟಕ ಸಂಘಟನೆಯ ರಾಜು. ಕರವೇ ಪ್ರಧಾನ ಕಾರ್ಯದರ್ಶಿ ಖಾದರ್,ಉಪಾಧ್ಯಕ್ಷ ಅರುಣ್ ಸಿಂಗ್ ,ಕಾರ್ತಿಕ್,ಪುರಸಭೆ ಸದಸ್ಯ ಜಗದೀಶ್,ವಿಜಯಲಕ್ಷ್ಮೀ,ಮುದ್ದಮ್ಮ,ನರಸಿಂಹಸ್ವಾಮಿ,ಲೊಕೇಶ್,ಮಾಳೆಗೆರೆ ತಾರನಾಥ್,ಸೇರಿದಂತೆ ಇತರರು ಹಾಜರಿದ್ದರು.
