
ಸಕಲೇಶಪುರ : ಬಾರಿ ಮಳೆಯಾದ ಕಾರಣ ಹೊಳೆಮಲ್ಲೇಶ್ವರ ದೇವಸ್ಥಾನದ ಒಳಗೆ ಕೆಸರು ಮರಳು ಹಾಗೂ ಕೊಚ್ಚಿಕೊಂಡು ಬಂದ ಕಸ ಪ್ಲಾಸ್ಟಿಕ್‌ಗಳಿಂದ ಕೂಡಿದೆ ಎಂದು ದೇವಸ್ಥಾನದ ಕಮಿಟಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಸ್ವಚ್ಛ ಮಾಡಿಕೊಡುವಂತೆ ತಿಳಿಸಿದರು
ಆದ್ದರಿಂದ ಇಂದು ಬೆಳಗ್ಗೆ10.30 ರಿಂದ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚತೆ ಮಾಡಲಾಯಿತು
ಈ ಸಂದರ್ಭದಲ್ಲಿ ದೇವಸ್ಥಾನದ ಕಮೀಟಿಯವರಾದ ಹರೀಶ್ ಆಚಾರ್ ಹಾಗೂ ಘಟಕ ಪ್ರತಿನಿಧಿ ಮಧುವರನ್, ಸಂಯೋಜಕಿ ದಿವ್ಯ ಸ್ವಯಂ ಸೇವಕರಾದ ಆನಂದ್ ,ಮಂಜುನಾಥ್, ಷಣ್ಮುಖ, ಶ್ಯಾಮಲಾಕುಮಾರಿ,ಸ್ಥಳಿಯರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು


