
ಹಾಸನ: ಬಾರಿ ಮಳೆಗೆ ನಗರದ ಸಮೀಪ ರಿಂಗ್ ರಸ್ತೆ ಬಳಿ ಇರುವ ಗುಂಡೇಗೌಡನ ಕೊಪ್ಪಲು ಗ್ರಾಮದಲಿ ಮಂಜುನಾಥ್ ಎಂಬುವರ ಪಂಪ್ ಸೆಟ್ ಮನೆಯ ಗೋಡೆ ಕುಸಿದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಹೆಚ್ಚಿನ ಮಳೆಯಿಂದ ಮಣ್ಣಿನ ಗೋಡೆಗಳು ಅಲ್ಲಲ್ಲಿ ಕುಸಿಯುತ್ತಿದ್ದು, ಗುಂಡೇಗೌಡನ ಕೊಪ್ಪಲು ಗ್ರಾಮದಲಿ ಪಂಪ್ ಸೆಟ್ ಗಾಗಿ ಹಾಕಲಾಗಿದ್ದ ಶೆಡ್ ಸಂಪೂರ್ಣ ಕಳೆಗೆ ಬಿದ್ದಿದೆ.
ಪಕ್ಕದಲ್ಲೆ ವಿದ್ಯುತ್ ಕಂಬ ಅಳವಡಿಸಿದ್ದು, ಅದು ಕೂಡ ಬಾಗಿದೆ. ರಾತ್ರಿ ಗೋಡೆ ಕುಸಿದಿರುವುದರಿಂದ ಯಾವುದೇ ಅಪಾಯ ಸಂಭವಿಸಿರುವುದಿಲ್ಲ ಏನಾದರೂ ಹಗಲಲ್ಲಿ ಬಿದ್ದಿದ್ದರೇ ಬಾರಿ ಅನಾಹುತವೇ ಆಗುತಿತ್ತು.
ಶೆಡ್ ಮಲೀಕ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಹೆಚ್ಚಿನ ಮಳೆಯ ಅವಾಂತರದಿಂದ ಗುಂಡೇಗೌಡನ ಕೊಪ್ಪಲು ಗ್ರಾಮದಲ್ಲಿರುವ ಪಂಪ್ ಸೆಟ್ ಮನೆ ಕೆಳಗೆ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಆಗಿರುವುದಿಲ್ಲ.
ಒಳಗಿದ್ದ ವಸ್ತುಗಳು ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ಬಿದ್ದಿರುವುದರಿಂದ ಯಾವ ಅನಾಹುತ ಆಗಿರುವುದಿಲ್ಲ. ಏನಾದರೂ ಹಗಲು ವೇಳೆ ಗೋಡೆ ಕುಸಿದಿದ್ದರೇ ವಿದ್ಯುತ್ ತಗಲಿ ಬಾರಿ ಅನಾಹುತವೇ ಆಗುತಿತ್ತು ಎಂದು ಹೇಳಿದ್ದಾರೆ


