
ಬೇಲೂರು : ತಾಲೂಕಿನ ಹಲವು ಕಡೆ, ಮಳೆಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆ ನಾಶ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನಿರ್ದೇಶನದ ಅನ್ವಯ ಬೇಲೂರು ತಾಲೂಕು ದಂಡಾಧಿಕಾರಿಗಳಾದ ಮಮತಾ ರವರ ಸಹಕಾರದಿಂದ ಬೇಲೂರಿನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಎಂ.ಎಸ್.ಶಶಿಕಲಾ ರವರು ತಾಲೂಕು ದಂಡಾಧಿಕಾರಿಗಳು ಸಿದ್ಧಪಡಿಸಿರುವ ಮಳೆ ಹಾನಿಗೊಳಗಾಗಿರುವವರ ಪಟ್ಟಿಯನಾದರಿಸಿ ಹಲವು ಪ್ರದೇಶಗಳಿಗೆ ನ್ಯಾಯಾಧೀಶರು ತೆರಳಿ ಸ್ಥಳ ಪರಿಶೀಲನೆ ನಡೆಸಿ ಹಾನಿಗೊಳಗಾಗಿರುವ ಜನರಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಿ ಕೊಡುವಂತೆ ತಾಲೂಕು ದಂಡಾಧಿಕಾರಿಯವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೇಲೂರು ತಾಲೂಕು ತಾಲೂಕು ಕಚೇರಿಯ 2ನೇ ದರ್ಜೆ ತಹಸೀಲ್ದಾರ್ ಅಶೋಕ್, ಕಸಬಾ ಕಂದಾಯ ಅಧಿಕಾರಿ ಯೋಗಾನಂದ ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ಪ್ರಕಾಶ್, ಗಿರಿಯಪ್ಪ ,ಉಪಸ್ಥಿತರಿದ್ದರು


