
ಸಕಲೇಶಪುರ :- ತಾಲ್ಲೂಕಿನ ವಳಲಹಳ್ಳಿ ಗ್ರಾಮಪಂಚಾಯಿತಿಯ ಬೊಮ್ಮನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ವಚ್ಛತೆ ಇಲ್ಲದೆ ಮಳೆಯಿಂದ ಅಲ್ಲಲ್ಲಿ ನೀರು ತುಂಬಿಕೊಂಡು ಕಸ ಹಾಗೂ ಪಾಚಿ ಕಟ್ಟಿ ಶಾಲಾ ಮಕ್ಕಳಿಗೆ ತಿರುಗಾಡಲು ಕಷ್ಟವಾಗಿದೆ.
ಮಕ್ಕಳು ಇಲ್ಲಿ ತಿರುಗಡುವುದರಿಂದ ಜಾರಿ ಬಿದ್ದು ಅನಾಹುತಕ್ಕೆ ಒಳಗಗುತ್ತಾರೆ. ಅಲ್ಲದೆ ಕಸ ಕಡ್ಡಿ ಹಾಗೂ ಕೊಳೆತ ವಸ್ತುಗಳಿಂದ ಬರುವ ವಾಸನೆ ಹಾಗೂ ಸೊಳ್ಳೆ ಗಳಿಂದ ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಎದುರಗುವ ಸಾಧ್ಯತೆ ಇದೆ.
ಕೂಡಲೆ ಗ್ರಾಮಪಂಚಾಯಿತಿ ಅಧಿಕಾರಿಗಳು ಸದಸ್ಯರು ಇದರ ಬಗ್ಗೆ ಗಮನ ಹರಿಸಿ ಪರಿಹಾರ ಮಾಡಿಕೊಡಬೇಕಾಗಿ ಸಾಮಜಿಕ ಹೋರಾಟಗಾರ ಬೊಮ್ಮನಕೆರೆ ವಸಂತ್ ಅಗ್ರಹಿಸಿದ್ದಾರೆ.
