ಹಾಸನದ ಅರಸೀಕೆರೆ ರಸ್ತೆಯ ಎಸ್.ಎಂ.ಕೃಷ್ಣನಗರದಲ್ಲಿ ಎಸ್.ಎಂ.ಕೃಷ್ಣ ನಗರ* *ಕ್ಷೇಮಭಿವೃದ್ಧಿ ಸಂಘ ಹಾಸನ, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಮತ್ತು ಯೋಗ ಚೇತನ ಕೇಂದ್ರ ಅಡಗೂರು, ರವರುಗಳ ಸಂಯುಕ್ತ ಆಶಯದಲ್ಲಿ 15 ದಿನಗಳ “ಆರೋಗ್ಯಕ್ಕಾಗಿ ಯೋಗ ” ಎಂಬ ಯೋಗಾಸನ, ಪ್ರಾಣಯಾಮ, ಮತ್ತು ಧ್ಯಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರದ ಉದ್ಘಾಟನೆಯನ್ನು ಹಾಸನ ಆಕಾಶವಾಣಿಯ ಮುಖ್ಯಸ್ಥರಾದ ವಿಜಯ್ ಅಂಗಡಿ ರವರು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ಅಧ್ಯಕ್ಷರಾದ ರೊಟೇರಿಯನ್ ಭುವನೆಷ್ ರವರು,* *ರೋಟೇರಿಯನ್ ವರ್ಜಕುಮಾರ್ ಹೆಚ್. ಡಿ, ರೋಟೇರಿಯನ್ ಕೆ.ಎಸ್ ಯೋಗೇಶ್ ರವರು ಹಾಜರಿದ್ದರು.

ಯೋಗ ಗುರು ಚೇತನ್ ಗುರೂಜಿ ರವರು ಶಿಬಿರದ ಕಾರ್ಯಕ್ರಮ ನಡೆಸಿಕೊಟ್ಟರು.

ಸದರಿ ಶಿಬಿರದಲ್ಲಿ ಸುಮಾರು 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸದರಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾರಿಗೂ ತುಂಬು ಹೃದಯದ ಅಭಿನಂದನೆಗಳು.

ಇಂತಿ : ಅಧ್ಯಕ್ಷರು/ಕಾರ್ಯದರ್ಶಿಗಳು**ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್,**ಹಾಸನ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *