
ಬೇಲೂರುಮಹಿಳೆಯರು ಸ್ವ ಉದ್ಯೋಗವನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ರಿಚ್ ಟು ಲೈಫ್ ಟ್ರಸ್ಟ್ ನ ಸಂಸ್ಥಾಪಕಿಯಾದ ಕೃತಿಕಾ ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರಿಗಾಗಿ ವಿಶೇಷ ಸಿದ್ಧ ಉಡುಪುಗಳು ಹಾಗೂ ಕೌಶಲ್ಯಾಭಿವೃದ್ದಿ ಕಾಂಬೋ ಬಜಾರ್ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಪುರುಷಪ್ರಧಾನ ದಿನಗಳಲ್ಲಿ ಮಹಿಳೆಯರು ಇತರರ ಮೇಲೆ ಅವಲಂಭಿತರಾಗುವ ಮನಸ್ಥಿತಿಯಿಂದ ಹೊರಬಂದು ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಬೇಕು.
ಇಂತಹ ಸ್ವ ಉದ್ಯೋಗ ಕೌಶಲ್ಯಾಭಿವೃದ್ದಿಗಳಿಂದಾಗಿ ನೂರಾರು ಮಹಿಳೆಯರಿಗೆ ಬದುಕನ್ನು ಕಟ್ಟಿಕೊಳ್ಳುವ ಉತ್ತಮ ವೇಧಿಕೆ ಆಗಲಿದೆ ಎಂದ ಅವರು ಇದರ ಜೊತೆ ಹೆಣ್ಣುಮಕ್ಕಳಾದ ನಾವು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ಹೆಚ್ಚನ ಗಮನ ಹರಿಸಬೇಕು.ಆರೋಗ್ಯವಂತ ಮನಸ್ಸು ಮನೆ ಸಮಾಜ ಒಂದು ಆರೋಗ್ಯಪೂರ್ಣವಾಗಿರುತ್ತದೆ ಎಂದ ಅವರು ಜಿವನದಲ್ಲಿ ಒಂದು ಬದ್ಧತೆ ನಿರ್ದಿಷ್ಟ ಕಾರಣಗಳನ್ನು ಮನದಲ್ಲಿಟ್ಟುಕೊಂಡು ನಡೆಯಬೇಕು.ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಸಾರ್ವಜನಿಕರೊಂದಿಗೆ ಬೆರತು ಅವರ ಕಷ್ಟಸುಖಗಳಿಗೆ ಬೆರೆತಾಗ ಯಶಸ್ಸು ತಾನಾಗೆ ಸಿಗುತ್ತದೆ ಎಂದರು.
ನಂತರ ಮಾತನಾಡಿದ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ್ ಸಾಧನೆ ಹಾದಿಯಲ್ಲಿ ಸಾಗುವಾಗ ಗಂಡು ಹೆಣ್ಣೆಂಬ ತಾರತಮ್ಯ ಬಿಟ್ಟು ನಾವು ಮಾಡುವ ಸಮಾಜಮುಖಿ ಕೆಲಸಗಳಲ್ಲಿ ಮುನ್ನಡೆಯಬೇಕು.ಮಹಿಳೆಯರು ಅಂಜಿಕೆ ಬಿಟ್ಟು ಯಶಸ್ಸಿಗಾಗಿ ಅಗತ್ಯವಾದ ದೈರ್ಯ ಛಲ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಇದರ ನಡುವೆ ಹೆಣ್ಣಿನ ಜನ್ಮದಾತವಾಗಿತರುವ ಕರುಣೆ,ಸಹನೆಯನ್ನು ಎಂದುಹ ಕೂಡ ಮರೆಯಬಾರದು.ಲಿಂಗಭೇದ ಮರೆತು ಸಮಾಜದಲ್ಲಿ ತಲೆ ಎತ್ತಿ ನಡೆಯುವ ಕೆಲಸವನ್ನು ಮಹಿಳೆಯರು ಮಾಡಬೇಕೆಂದು ಕರೆ ನೀಡಿದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಹಾಗೂ ಕಾಂಬೊ ಬಜಾರ್ ಆಯೋಜಕರಾದ ತಾರಾ ಪುರುಷೋತ್ತಮ್ ಮಾತನಾಡಿ ಮಹಿಳೆಯರಾದ ನಾವು ಹುಟ್ಟಿನಿಂದಲೇ ನಾಯಕತ್ವ ಹಾಗೂ ಜವಬ್ದಾರಿ ಗುಣಗಳನ್ನು ಹೊಂದಿರಬೇಕು.ಜೀವನದಲ್ಲಿ ಅನುಭವ ತಕ್ಕಂತೆ ಸಾಗುತ್ತಾ ಎಲ್ಲಾ ಹಂತದಲ್ಲಿ ನಾವು ಸ್ವಾವಲಂಭಿಗಳಾಗಿ ಬದುಕಲು ಇತರರಿಗೂ ಸಹ ಬದುಕಿನ ಜವಬ್ದಾರಿಯನ್ನು ಕಲಿಸುವ ಕೆಲಸ ಮಾಡಬೇಕು.ಸುಮಾರು ೩೦ ವರ್ಷಗಳಿಂದ ಇದರ ಸಂಸ್ಥಾಪಕರಾದ ಪ್ರಮೀಳ ಅವರು ಮಹಿಳೆಯರು ಅವರ ಕೌಶಲ್ಯ ಅಭಿವೃದ್ದಿ ಇಂತಹ ಮೇಳಗಳಲ್ಲಿ ಭಾಗವಹಿಸಿ ಸ್ವ ಉದ್ಯೊಗಗಳಲ್ಲಿ ಹೇಗೆ ಭಾಗವಹಿಸಬೇಕು ಎಂಬುವುದರ ಬಗ್ಗೆ ಮೇಳಗಳನ್ನು ಆಯೋಜಿಸುತ್ತಿದ್ದಾರೆ.ಮುಂದಿನ ದಿನಗಳಲ್ಲಿ ನಗರಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗಗಳಲ್ಲಿ ಇಂತಹ ಮೇಳ ನಡೆಸಲಾಗುವುದು ಎಂದರು.
ಈ ವೇಳೆ ಸುಮಾರು ೨೫ ಕ್ಕೂ ಹೆಚ್ಚು ಭಾಗಗಳಿಂದ ರಾಜಸ್ಥಾನ ಚೆನ್ನೈ, ತಮಿಳುನಾಡು,ಕೇರಳ,ಮುಂಬೈ ಸೇರಿದಂತೆ ವಿವಿಧ ರಾಜ್ಯದ ವಿಶೇಷ ಸಿದ್ಧ ಉಡುಪುಗಳು ಹಾಗೂ ತಾವೇ ಸಿದ್ಧಪಡಿಸಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ನ ಸೆಳೆದರು.
ಈ ಸಂದರ್ಭದಲ್ಲಿ ವಾಸವಿ ವನಿತಾ ಸಂಘದ ಅಧ್ಯಕ್ಷೆ ಪ್ರಮೀಳಾ, ಸಹಾಯಕ ನಿಭಂದಕರಾದ ಮೀನಾ ,ಹೇಮಾ ವಿರುಪಾಕ್ಷ,ಮಂಜುಳಾ,ಸೌಮ್ಯಾಆನಂದ್,ಕಾಂಬೋ ಬಜಾರ್ ಸಂಸ್ಥಾಪಕರಾದ ಶ್ರೀಮತಿ ಪ್ರಮೀಳ ಇತರರು ಹಾಜರಿದ್ದರು.


