
ಬೇಲೂರು : ತಾಲೂಕು ಅರೆಹಳ್ಳಿ ಹೋಬಳಿಯ ಕೊರ್ಲಗದ್ದೆ ಗ್ರಾಮದಲ್ಲಿ ಇಂದು ಮಹಿಳೆಯರು ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದ್ದು ಹದಿನೈದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ, ಕೋರ್ಲಗದ್ದೆ ಗ್ರಾಮದಲ್ಲಿ ಇಂದು ಕೆ.ಬಿ.ಚಂದ್ರು ,ದ್ಯಾವಪ್ಪಗೌಡ ಎಂಬುವವರಿಗೆ ಸೇರಿದ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ 25 ಮಂದಿ ಮಹಿಳೆಯರು ಗುಡುಗು, ಸಿಡಿಲು ಸಹಿತ ದಿಢೀರ್ ಶುರುವಾದ ಮಳೆಯಿಂದ ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದ ವೇಳೆಯೇ ಸಿಡಿಲಾಘಾತವಾಗಿದೆ.
ಲತಾ (35) ಎಂಬುವವರ ಸ್ಥಿತಿ ಗಂಭೀರವಾಗಿದ್ದು ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮಾ (55), ನೇತ್ರ (40), ನಿರ್ಮಲ (51), ವೀಣಾ (35), ಅನಿತಾ (55) ಸೇರಿದಂತೆ ಹದಿನೈದು ಮಂದಿಗೆ ಸಿಡಿಲು ಬಡಿತವಾಗಿ ಎಲ್ಲರಿಗೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ ಸಂದ್ಯಾ, ಡಾ.ಚಂದನ್ ತಿಳಿಸಿದ್ದಾರೆ.



