
ಹಾಸನ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಹೌಸಿಂಗ್ ಬೋರ್ಡ್ ಬಳಿ ಇರುವ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿರುವ ಸೈನಿಕರ ಭವನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲೆ ಮತ್ತು ರಸಪ್ರಸ್ನೆ ಸ್ಪರ್ದೆಯಲ್ಲಿ ಸುಮಾರು ೪೫ಕ್ಕೂ ಹೆಚ್ಚಿನ ಮಕ್ಕಳು ಉತ್ಸಹದಿಂದ ಪಾಲ್ಗೊಂಡಿದ್ದು, ಸ್ಪರ್ದೆಯಲ್ಲಿ ಗೆದ್ದ ಮಕ್ಕಳಿಗೆ ಆಗಸ್ಟ್ ೧೫ ರಂದು ಬಹುಮಾನ ನೀಡಿ ಪುರಸ್ಕರಿಸಲಾಗುತ್ತದೆ.
ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ ಮಾತನಾಡಿ, ಪ್ರಸ್ತೂತದಲ್ಲಿ ಸ್ಪರ್ದೆ ಮಾತ್ರವಲ್ಲ. ಈ ಮಕ್ಕಳ ಮುಂದಿನ ಬೆಳೆವಣಿಗೆ ನಮ್ಮ ದೇಶದ ಆಸ್ತಿ, ಈಗ ನಡೆಯುತ್ತಿರುವ ಕ್ರೀಡೆಯನ್ನು ನಾವುಗಳೆಲ್ಲಾ ನೋಡುತ್ತಿದ್ದು, ಗೋಲ್ಡ್ ಮೆಡಲ್ ತಂದಿದ್ದಾರೆ.
ದೇಶದ ಮಕ್ಕಳು, ಸೈನಿಕರ ಮಕ್ಕಳು ನಮ್ಮೆಲ್ಲರ ಆಸ್ತಿ. ಚಿಕ್ಕ ಚಿಕ್ಕ ಸ್ಪರ್ದೆಯಲ್ಲಿ ಪಾಲ್ಗೊಂಡು ಮುಂದೆ ದೊಡ್ಡ ದೊಡ್ಡ ಸ್ಪರ್ದೆಯಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದು ಕಿವಿಮಾತು ಹೇಳಿದರು.
ಮಕ್ಕಳು ಸಂಸ್ಕಾರ ಉಳ್ಳ ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ದೊಡ್ಡ ಆಸ್ತಿ ಆಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಾಗರ್ ಮಾತನಾಡಿ, ಸ್ವತಂತ್ರ್ಯ ದಿನದ ಅಂಗವಾಗಿ ನಾವು ನಮ್ಮ ಹಾಸನ ಜಿಲ್ಲಾ ಮಾಜಿ ಸೈನಿಕರ ಕುಟುಂಬ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ದೆ, ಕ್ವಿಜ್ ಸ್ಪರ್ದೆಯನ್ನು ಕಳೆದ ವರ್ಷವೂ ಕೂಡ ಹಮ್ಮಿಕೊಂಡಂತೆ ಈ ವರ್ಷವೂ ಕೂಡ ಏರ್ಪಡಿಸಲಾಗಿದೆ ಎಂದರು.
ಪ್ರಸ್ತೂತದಲ್ಲಿ ಸ್ಪರ್ದೆ ಎಂಬುದು ಹೆಚ್ಚಾಗಿದ್ದು, ಮಾಜಿ ಸೈನಿಕರ ಮಕ್ಕಳಿಗೂ ಭಾಗವಹಿಸಲು ದೈರ್ಯ ಬರಲೆಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ವಿವಿಧ ಸ್ಪರ್ದೆಯಲ್ಲಿ ಸುಮಾರು ೪೦ ರಿಂದ ೪೫ ಜನ ಮಕ್ಕಳುಬಹಳ ಉತ್ಸಹದಿಂದ ಪಾಲ್ಗೊಂಡಿದ್ದು, ದೇಶ ಭಕ್ತ ಕುರಿತು ಡ್ರಾಯಿಂಗ್ ಬರೆಯಲು ಅವಕಾಶ ಕೊಟ್ಟಿರುವಂತೆ ಮಕ್ಕಳು ತುಂಬ ಚನ್ನಾಗಿ ಬರೆದಿದ್ದಾರೆ ಎಂದು ಇದೆ ವೇಳೆ ಶ್ಲಾಘಿಸಿದರು.
ಇದೆ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವೆಂಕಟೇಶ್, ಖಜಾಂಚಿ ಬಾಲಕೃಷ್ಣ, ಚನ್ನರಾಯಪಟ್ಟಣ ತಾಲೂಕು ನಿರ್ದೇಶಕರಾದ ಚಂದ್ರಶೇಖರ್, ತಾಲೂಕು ನಿರ್ದೇಶಕ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
