ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿ ಅಗನಿ ಗ್ರಾಮದಲ್ಲಿ ಮೂರು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆ ಹದಗೆಟ್ಟಿದೆ

ಸುಮಾರು 100 ಮೀಟರ್ ಇಂದ 200 ಮೀಟರ್ ರಸ್ತೆ ತುಂಬಾ ಹದಗೆಟ್ಟಿರುತ್ತದೆ ಇಲ್ಲಿ ಜನ ಸಾಮಾನ್ಯರು ಓಡಾಡಲು ತುಂಬಾ ಕಷ್ಟವಾಗುತ್ತಿದ್ದು ಸುಮಾರು 30 ಮನೆ ಇರುವ ಈ ಸ್ಥಳದಲ್ಲಿ ಏನಾದರೂ ತುರ್ತು ಪರಿಸ್ಥಿತಿ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಓಡಾಡಲು ತುಂಬಾ ಕಷ್ಟವಾಗುತ್ತಿದೆ.

ಈ ರೀತಿ ಆದರೂ ಕೂಡ ಯಾವ ಅಧಿಕಾರಿಗಳು ಕೂಡ ಈ ಸ್ಥಳಕ್ಕೆ ಭೇಟಿ ನೀಡಿಲ್ಲ. ದಯವಿಟ್ಟು ಆದಷ್ಟು ಬೇಗ ರಸ್ತೆ ಹದಗೆಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕೆಲಸವನ್ನು ಮಾಡಿಸಿಕೊಡಬೇಕಾಗಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *