ಬೇಲೂರು : ಪಟ್ಟಣದ ಪ್ರಸಿದ್ಧ ಬ್ಯಾಂಕ್ ಗಳಲ್ಲಿ ಒಂದಾದ ಅರ್ಬನ್ ಕೊ ಆಪರೇಟಿವ್ ಬ್ಯಾಂಕಿನ ೧೩ ಜನ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರ ಆಯ್ಕೆಗಾಗಿ ಚಂದ್ರಶೇಖರ್ ಹಾಗೂ ಎಸ್ ಕೆ ನಾಗೇಶ್ ಅವರು ನಾಮಪತ್ರ ಸಲ್ಲಿಸಿದ್ದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ೭ ಮತಗಳನ್ನು ಚಂದ್ರಶೇಖರ್ ಪಡೆದರೆ ೬ ಮತಗಳನ್ನು ಎಸ್ ಕೆ ನಾಗೇಶ್ ಪಡೆಯುವ ಮೂಲಕ ೧ ಮತದ ಅಂತರದಲ್ಲಿ ಪರಾಭವಗೊಂಡರು.

ಚುನಾವಣಾಧಿಕಾರಿ ಲೀಲಾ ಅವರು ಚಂದ್ರಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.

ಈ ವೇಳೆ ಮಾತನಾಡಿದ ಬ್ಯಾಂಕಿನ ಹಿರಿಯ ಸದಸ್ಯರಾದ ಹೇಮಾವತಿ ಮಂಜುನಾಥ್ ನಮ್ಮ ಬ್ಯಾಂಕಿನಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ.ಆದರೆ ಬೇಸರದ ಸಂಗತಿ ಎಂದರೆ ನಮ್ಮ ಈ ಬ್ಯಾಂಕಿನಲ್ಲಿ ಚುನಾವಣೆಗಳು ನಡೆಯಬಾರದು ಅವಿರೋಧವಾಗಿ ಆಯ್ಕೆಯಾಗುವಂತ ಕೆಲಸ ಆಗಬೇಕು.ಚುನಾವಣೆ ನಡೆದು ಅಧ್ಯಕ್ಷರಾಗಿರುವವರು ಎಲ್ಲರ ಸಹಕಾರ ಪಡೆದು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ನಿಕಟ ಪೂರ್ವ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ ಯಾವುದೇ ಸಹಕಾರಿ ಕ್ಷೇತ್ರದಲ್ಲಾಗಬಹುದು ಅಥವಾ ಇಂತಹ ಬ್ಯಾಂಕ್ ಗಳಲ್ಲಿ ಅನಿವಾರ್ಯ ವಾಗಿ ಚುನಾವಣೆ ನಡೆಯುವ ಮೂಲಕ ಚಂದ್ರಶೇಖರ್ ಅವರು ಜಯಶೀಲರಾಗಿದ್ದಾರೆ.

ಈ ಹಿಂದೆ ನಾನು ಅಧ್ಯಕ್ಷನಾಗಿದ್ದಾಗ ಅವರೋಧವಾಗಿ ಆಯ್ಕೆಯಾಗಿದ್ದೆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುವುದಾಗಿ ತಿಳಿಸಿದರು.

ನೂತನ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ೨ ನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನನ್ನೆಲ್ಲಾ ಆಡಳಿತ ವರ್ಗ ಹಾಗೂ ನಿರ್ದೇಶಕರಿಗೆ ಶೇರುದಾರರಿಗೆ ಧನ್ಯವಾದ ಅರ್ಪಿಸುತ್ತೇನೆ.

ಈಗಾಗಲೇ ನಮ್ಮ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿ ವ್ಯವಹಾರ ನಡೆಸುತ್ತಿದ್ದು ಸ್ವಂತ ಕಟ್ಟಡವನ್ನು ಮಾಡುವ ಉದ್ದೇಶದಿಂದ ನನ್ನೆಲ್ಲಾ ನಿರ್ದೇಶಕರ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಅಲ್ಲದೆ ನಮ್ಮ ಬ್ಯಾಂಕ್ ನಲ್ಲಿ ಸುಮಾರು ೧೦ ಕೋಟಿ ವರೆಗೂ ಸಾಲಕೊಟ್ಟಿದ್ದು ದುಡಿಮೆ‌ ಬಂಡವಾಳ ೧೮ ಕೋಟಿಯೊಂದಿಗೆ ವ್ಯವಹಾರ ಮಾಡುತ್ತಿದ್ದು ಈ ವರ್ಷ ೨೩-೨೪ ರ ಸಾಲಿನಲ್ಲಿ ೧ ಲಕ್ಷ.೮೦.ಸಾವಿರ ನಿವ್ವಳ ಲಾಭದೊಂದಿಗೆ ವ್ಯವಹಾರ ನಡೆಸುತ್ತಿದ್ದು ೨೬೦೦ ಜನ ಶೇರುದಾರರು ಇದ್ದು ಇನ್ನು ಹೆಚ್ಚಿನ ಶೇರುದಾರರನ್ನು ಸೇರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್ ಎಸ್ ಸುಬ್ರಹ್ಮಣ್ಯ,ಬಲರಾಮೇಗೌಡ,ಶಿವರಾಜ್,ವಿಜಿಕುಮಾರ್,ಪ್ರಸನ್ನ ಲೀಲಾವೆಂಕಟೇಶ್,ತಾರನಾಥ್,ಸೋಮಶೇಖರ್, ಲಕ್ಷ್ಮಣ್ ಗೌಡ ಹಾಗೂ ಬ್ಯಾಂಕಿನ ವ್ಯವಸ್ಥಾಪಕರಾದ ಶಿವಕುಮಾರ್,ಕಲ್ಯಾಣಕುಮಾರ್,ಜಯಂತಿ,ತೀರ್ಥಕುಮಾರ್,ಸುರೇಶ್ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *