ಬೇಲೂರು : ಈ ಹಿಂದೆ ಅಧ್ಯಕ್ಷರಾಗಿದ್ದ ಶಾರದಮ್ಮರವರ ರಾಜಿನಾಮೆ ಹಿನ್ನಲೆಯಲ್ಲಿ ಇಂದು ಮಾಳೆಗೆರೆ ಕ್ಷೇತ್ರದ ಎಂಡಿ ಬಸವರಾಜು ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜು ಅವರಿಗೆ ಶುಭ ಹಾರೈಸಿ ಮಾತನಾಡಿದ ಮಾಜಿ ಜಿಪಂ ಹಾಗೂ ಯೂನಿಯನ್‌ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿಡಿ ಚಂದ್ರೇಗೌಡ ೫ ವರ್ಷಗಳ ಹಿಂದೆ ಸಣ್ಣ ಕಟ್ಟಡದಲ್ಲಿ ಪ್ರಾರಂಭವಾದ ಈ ಸಹಕಾರ ಸಂಘ ಇಂದು ಬೇಲೂರು ತಾಲೂಕಿನಲ್ಲಿ ಪ್ರಥಮ ಸಹಕಾರ ಸಂಘವಾಗಿದೆ.

ಸುಮಾರು ೧೦ ಕೋಟಿಗಳವರೆಗೆ ಸಾಲವನ್ನು ರೈತರಿಗೆ ನೀಡುವ ಮೂಲಕ ಶೇಕಡ ೧೦೦ ರಷ್ಟು ಮರುಪಾವತಿಯೊಂದಿಗೆ ಸುಸ್ಥಿತಿಯಲ್ಲಿದೆ.

ಇದರ ಜೊತೆಯಲ್ಲಿ ಕೃಷಿಕರಿಗೆ ಗೊಬ್ಬರ ಪಡಿತರ ವಿತರಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸುವುದರ ಜೊತೆಗೆ ಸುಮಾರು ೪೦ ಲಕ್ಷದ ವರೆಗೆ ಚಿನ್ನಾಭರಣ ಸಾಲ ಹಾಗೂ ಠೇವಣಿ ಹಣ ೧ ಕೋಟಿಗೂ ಹೆಚ್ಚು ಹಣ ಸಂಗ್ರಹಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆ.ಅಲ್ಲದೆ ಇಲ್ಲಿರುವ ಎಲ್ಲಾ ನಿರ್ದೇಶಕರ ಸಹಕಾರದಿಂದ ಹಾಗೂ ಜಿಲ್ಲಾಬ್ಯಾಂಕಿನಿಂದ ಬರುವಂತಹ ೪ ಹಣವನ್ನು ರೈತರಿಗೆ ಹಂಚುವ ಮೂಲಕ ರೈತರ ಹಾಗೂ ಸಹಕಾರ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಬಂದಂತ ಅಧ್ಯಕ್ಷರು ಇನ್ನು ಎತ್ತರಕ್ಕೆ ಬೆಳಸಬೇಕು ಎಂದು ಶುಭ ಹಾರೈಸಿದರು.

ನೂತನವಾಗಿ ಅಧ್ಯಕ್ಷರಾದ ಎಂಡಿ ಬಸವರಾಜು ಮಾತನಾಡಿ ಹಿರಿಯರ ಹಾಗೂ ನನ್ನೆಲ್ಲಾ ನಿರ್ದೇಶಕರ ಸಹಕಾರದಿಂದ ನಿರ್ದೇಶಕರು ನನ್ನಮೇಲೆ ನಂಬಿಕೆ ಇಟ್ಟು ಅಧ್ಯಕ್ಷರನ್ನಾಗಿ ಮಾಡಿದ್ದಾರೆ.ಅಲ್ಲದೆ ನನ್ನ ಅವಧಿಯಲ್ಲಿ ರೈತರಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ರೀತಿಯಲ್ಲಿ ನೆರವು ನೀಡುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತದೆ.

ಹೈನುಗಾರಿಕೆ ಮುಖ್ಯ ಉದ್ದೇಶವಾಗಿರುವುದರಿಂದ ಈ ಭಾಗದ ರೈತರಿಗೆ ಅದರ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅವರಿಗೆ ಸಹಕಾರ ನೀಡುವ ಮೂಲಕ ಅವರನ್ನು ಸಹಾಯ ನೀಡಲು ಕಾರ್ಯಪ್ರವೃತ್ತನಾಗುತ್ತೇನೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಲೊಕೇಶ್,ದೇವರಾಜು,ಕುಮಾರ್,ಜಯರಂಗೇಗೌಡ,ರೇಣುಕಾ,ಖಲಂದರ್ ಫಿರ್,ಶಾರದಮ್ಮ,ಪಾರ್ವತಮ್ಮ, ಮೀನಾಕ್ಷಮ್ಮ ಕಾರ್ಯದರ್ಶಿ ಧರ್ಮೇಗೌಡ,ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *