
ಹಾಸನ: ನೀವು ಗಳಿಸಿದ ಹಣ, ಸಂಪತ್ತು ಇತರೆ ಎಲ್ಲಾವನ್ನು ಮತ್ತೊಬ್ಬರೂ ಕಸಿದುಕೊಳ್ಳಬಹುದು. ಆದರೇ ನೀವು ಪಡೆದ ಶಿಕ್ಷಣವನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣದ ಜೊತೆ ಜೊತೆಯಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಹಾಸನ ಜಿಲ್ಲಾ ಬಾಬು ಜಗಜೀವನ ರಾಮ್ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಾವು ಉತ್ತಮವಾಗಿ ಓದಿದ ಹಿನ್ನಲೆಯಲ್ಲಿ ಇಂತಹ ಪ್ರತಿಭಾಪುರಸ್ಕಾರಗಳು ನಿಮಗೆ ಸಿಗುತ್ತಿದೆ. ಓದುವ ವೇಳೆ ಸಮಯ ವ್ಯರ್ಥ ಮಾಡದೇ ಶಿಸ್ತು ಬದ್ಧವಾಗಿ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಿದರೇ ನಮ್ಮಾಗೆ ಒಂದು ಉತ್ತಮ ಸ್ಥಾನಕ್ಕೆ ಬರಬಹುದು.
ಈ ಪ್ರತಿಭಾ ಪುರಸ್ಕಾರ ಮಕ್ಕಳಿಗೆ ಕೊಡುತ್ತಿರುವುದು ಪೋಷಕರಿಗೆ ಸಂತೋಷ ತರುವುದು ಸಾಮಾನ್ಯ. ಎಲ್ಲಾವನ್ನು ಮತ್ತೊಬ್ಬರಿಂದ ಕಸಿದುಕೊಳ್ಳಬಹುದು ಆದರೇ ನಿಮ್ಮ ಎಜುಕೇಶನನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಂದಲೇ ಒಂದು ಗುರಿ ಎಂಬುದನ್ನು ಇಟ್ಟುಕೊಂಡು ಮುಂದೆ ಸಾಗಬೇಕು. ಅದರಂತೆ ಪೋಷಕರು ಸಹ ಮಕ್ಕಳ ಆಸೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡು ಏನು ಇಷ್ಟ ಪಡುತ್ತಾರೆ ಎಂಬುದನ್ನು ಗುರುತಿಸಿ ಸಾಧನೆಗೆ ಪ್ರೋತ್ಸಹಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅರ್ಥಿಸಿ ಕೊಳ್ಳಬೇಕಾದ ಮುಖ್ಯವಾದ ವಿಚಾರವೆಂದರೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೋಷಕರು ಮುಖ್ಯವಾಗಿ ಮಕ್ಕಳಿಗೆ ಇಷ್ಟವಾದ ವಿಚಾರವನ್ನು ಓದಲು ಹಾಗೂ ರೂಢಿಸಿಕೊಳ್ಳಲು ಅವಕಾಶ ನೀಡಬೇಕು. ಒತ್ತಡ ಹೇರಬಾರದು ಎಂದು ಸಲಹೆ ನೀಡಿದರು. ಶಿಕ್ಷಣ ಒಂದಕ್ಕೆ ಮಾತ್ರ ಹೆಚ್ಚಿನ ಹೊತ್ತು ನೀಡದೇ ಜೊತೆ ಜೊತೆಯಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು. ಈ ಸಮಾಜದಲ್ಲಿ ಓದುವುದು ಒಂದೆ ಅಲ್ಲ. ಒಳ್ಳೆಯ ಸಂಸ್ಕೃತಿ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣಕ್ಕೆ ಮಹತ್ವ ಬರುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.
ಅನ್ಯರಿಗೆ ತೊಂದರೆ ನೀಡಬಾರದು. ಎಲ್ಲರೊಂದಿಗೆ ಸೌಹಾರ್ದಯುತವಾಗಿ ನಡೆಸಬೇಕು. ಯಾರ ಜೊತೆಗೂ ವೈಮನಸ್ಸು ಮಾಡಿಕೊಳ್ಳಬಾರದು. ಸದಾ ಸಂತಸದಿಂದಿರಿ. ಬೇರೆಯವರಿಗೆ ಕೆಟ್ಟದನ್ನು ಬಯಸಬೇಕು. ವಿದ್ಯಾರ್ಥಿಗಳು ದೇಶದ ಭವಿಷ್ಯದ ಆಸ್ತಿ. ಉತ್ತಮ ರೂಪದಲ್ಲಿ ರೂಪುಗೊಳ್ಳಬೇಕು. ಉತ್ತಮ ನಾಗರಿಕರಾಗಿ ಮುಂದಿನ ದಿನಗಳಲ್ಲಿ ಜೀವನ ಉಪಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ರಾಜ್ಯ ಖಜಾನೆ ಇಲಾಖೆ ಹೆಚ್ಚುವರಿ ನಿರ್ದೇಶಕರಾದ ಡಾ|| ವಿ. ಭಾಗ್ಯಲಕ್ಷ್ಮಿ ರವರು ಮಾತನಾಡಿ, ಸಮುದಾಯಕ್ಕೆ ಯುವ ಪೀಳಿಗೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ನೀಡುವ ಪ್ರಯತ್ನವನ್ನು ಯಶಸ್ವಿಯಾಗಿ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘ ಮಾಡುತ್ತಿದೆ ಈ ಕಾರ್ಯ ಶ್ಲಾಘನೀಯ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ದೈರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಮಹಿಳೆಯರ ಜೊತೆ ಸದಾ ನಿಲ್ಲಬೇಕು ಎಂಬುದಕ್ಕೆ ಬಾಬು ಜಗಜೀವನ್ ರಾಮ್ ಸಂಘ ಮಹಿಳೆಯರಿಗೆ ಆದ್ಯತೆ ನೀಡಿರುವುದು ಸಹ ಒಂದು ಉತ್ತಮ ಕಾರ್ಯವಾಗಿದೆ.
ಪ್ರತಿಭಾ ಪುರಸ್ಕಾರ ಅಥವಾ ಸನ್ಮಾನ ಎಂದರೆ ಕೇವಲ ಹಾರ್ ಶಾಲು ಮಾತ್ರವಲ್ಲ. ಅದು ನಿಮ್ಮ ಪ್ರತಿಭೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನೀಡುತ್ತಿರುವ ಪ್ರೋತ್ಸಾಹ. ಶೋಷಿತರು ನಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತಿರುವುದು ಸ್ವಾರ್ಥಕ್ಕಾಗಿ ಅಲ್ಲ. ನಮ್ಮ ಹಕ್ಕುಗಳು ನಮಗೆ ಮನುಷ್ಯನಾಗಿ ಸಿಗಲೇ ಬೇಕಾದ ಸಮಾನತೆ. ಜಾತಿ ಪದ್ಧತಿ ಮತ್ತು ಪ್ರಜಾ ಪ್ರಭುತ್ವ ಒಟ್ಟಿಗೆ ಇರುವುದು ಕಷ್ಟ ಸಾಧ್ಯ. ಆದರೆ ಸಂವಿಧಾನದಿಂದ ಎಲ್ಲರಲ್ಲಿ ಉದಾರ ಮನೋಭಾವ ಮೂಡುತ್ತದೆ. ಬದಲಾವಣೆ ಬದುಕಿನ ಅವಶ್ಯಕತೆ ಅಲ್ವಾ ಸಹಜ ಪ್ರಕ್ರಿಯೆಯಾಗಿ ಎಲ್ಲರಲ್ಲಿ ಮೂಡಬೇಕು ಎಂದು ಬಾಬು ಜಗಜೀವನ್ ರಾಮ್ ಅವರು ಈ ಹಿಂದೆಯೇ ಹೇಳಿದ್ದರು.
ಇಂದಿಗೂ ಸಹ ಸಾಮಾಜಿಕ ಬದಲಾವಣೆಗಾಗಿಯೇ ಹೋರಾಟ ನಡೆಸುತ್ತಿದ್ದೇವೆ. ಬಾಬಾ ಸಾಹೇಬರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಜೀವನದಲ್ಲಿ ರೂಢಿಸಿಕೊಂಡು ಜಾತಿ ವ್ಯವಸ್ಥೆ, ವರ್ಣವ್ಯವಸ್ಥೆ ಎಲ್ಲವನ್ನೂ ಮೆಟ್ಟಿನೊಳ್ಳುವಂತಾಗಬೇಕು.ಒಂದು ಸಂಘಟನೆ ಎಂಬುದು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಹಾಸನದ ಬಾಬು ಜಗಜೀವನ್ ರಾಮ್ ಸಂಘಟನೆ ಒಂದು ಉತ್ತಮ ಉದಾಹರಣೆಯಾಗಿದೆ. ಇದೇ ರೀತಿಯಲ್ಲಿ ಸಂಘಟನೆ ಕಾರ್ಯ ಮುಂದುವರಿಸಲಿ ಎಂದರು.
ಇದೆ ವೇಳೆ ಜಿಲ್ಲಾ ಬಾಬು ಜಗಜೀವನ ರಾಮ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆರಾದ ಎಲ್.ಎಸ್. ಬಸವರಾಜು, ಸಾಮಾಜಿಕ ಕಾರ್ಯಕರ್ತರಾದ ಎಂ. ನಾಗಮಣಿ, ಸಂಘದ ಗೌರವಾಧ್ಯಕ್ಷರಾದ ಟಿ.ಎಲ್. ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಲ್.ಹೆಚ್. ಸೋಮಶೇಖರ್, ಲೆಕ್ಕಪರಿಶೋಧಕರಾದ ಆರ್. ರಂಗರಾಜು, ಸಂಗಟನಾ ಕಾರ್ಯದರ್ಶಿ ಆರ್. ತೀರ್ಥಪ್ರಸಾದ್, ಕೆ.ಪಿ. ಸುರೇಶ್ ಇತರರು ಉಪಸ್ಥಿತರಿದ್ದರು.
ಕೆ.ಸಿ. ರಘು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಶಿವಣ್ಣ.ಟಿ.ಎಸ್. ಪ್ರಧಾನ ಕಾರ್ಯದರ್ಶಿಯವರಾದ ಸೋಮಶೇಖರ್.ಎಲ್. ಹೆಚ್, ಲೆಕ್ಕಪತ್ರ ಪರಿಶೋಧಕರಾದ ರಂಗರಾಜು, ಆರ್, ಸಂಘಟನಾ ಕಾರ್ಯದರ್ಶಿ ತೀರ್ಥ ಪ್ರಸಾದ್.ಆರ್, ಸದಸ್ಯರುಗಳಾದ ರಾಜು ಬಿ. ಹೆಚ್, ಯೋಗೇಶ್, ಜಯರಾಮ್ ಸ್ವಾಮಿ, ಮಲ್ಲೇಶಪ್ಪ, ಧರ್ಮ, ಚಂದ್ರ ಕುಮಾರ್, ಸೇರಿದಂತೆ ಮಹಿಳಾ ಸದಸ್ಯರುಗಳಾದ ತೀರ್ಥಮಣಿ, ಅಶ್ವಿನಿ, ಭಾಗ್ಯ, ಪುಷ್ಪಲತ, ಸ್ವರ್ಣಲತಾ, ಚಂದ್ರಮತಿ, ನಾಗರತ್ನ, ಸತ್ಯವತಿ ಸೇರಿದಂತೆ ಇತರ ಸದಸ್ಯರು ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.




