ಬೇಲೂರು : ತಾಲೂಕಿನ ರಾಯಪುರ ಗ್ರಾಮದಲ್ಲಿ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಗದ್ದೆ ನಾಟಿ ಮಾಡುವ ಕಾರ್ಯಕ್ರಮಕ್ಕೆ ವಿಶೇಷವಾಗಿ ಭತ್ತದ ಮಡಿಗೆ ಪೂಜೆ ಸಲ್ಲಿಸಿದ ಜಿಲ್ಲಾ ಗೌರ್ನರ್ ಭಾರತಿ ಅವರ ಮಾರ್ಗದರ್ಶನದಲ್ಲಿ ಚಾಲನೆ ನೀಡಲಾಯಿತು.

ಪ್ರತಿನಿತ್ಯ ಸಾರ್ವಜನಿಕರ ಜೊತೆ ಕೆಲಸ ಮಾಡುವ ಎಲ್ಲಾ ವೃತ್ತಿಬಾಂಧವರು ಇಂದು ವಿಶೇಷವಾಗಿ ರೈತರ ಜೊತೆ ಕೆಲಸ ಮಾಡುವ ಮೂಲಕ ಗದ್ದೆ ನಾಟಿ. ಬದ ಕೋಚ್ಚುವುದು. ನೇಗಿಲು ಉಳುಮೆ. ಮಾಡುವ ಮೂಲಕ ಒಂದು ದಿನ ರೈತರಾಗಿ ತಮ್ಮ ಜೀವನದ ಸಾರ್ಥಕತೆಯನ್ನು ಲಯನ್ ಸೇವಾ ಸಂಸ್ಥೆಯ ಸದಸ್ಯರು ಪಾಲ್ಗೊಳೊ ಮೂಲಕ ಭೂಮಿ ತಾಯಿ ನಮನ ಅರ್ಪಿಸಿದರು

ಈ ವೇಳೆ ಮಾತನಾಡಿದ ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ. ಡಾ,ಚಂದ್ರಮೌಳಿ ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವ ಶೇ. ೯೦ರಷ್ಟು ಮಂದಿ ಉದ್ಯೋಗಿಗಳು ಮೂಲತಃ ರೈತರ ಮಕ್ಕಳೇ ಆಗಿದ್ದಾರೆ. ಅವರುಗಳು ತಮ್ಮ ಮೂಲಕ ಸುಖವನ್ನು ಬಿಟ್ಟು ಜೀವನೋಪಾಯಕ್ಕಾಗಿ ಒಮ್ಮೆ ನಗರ ಪ್ರದೇಶಗಳಿಗೆ ತೆರಳಿದವರು ಮತ್ತೆ ಗ್ರಾಮಗಳಿಗೆ ಹಿಂತಿರುಗಲು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದರಲ್ಲದೆ. ನಗರ ಪ್ರದೇಶದಲ್ಲಿ ಕೋಟಿ ದುಡಿದರು

ಗ್ರಾಮೀಣ ಭಾಗದಲ್ಲಿ ದುಡಿಯೋ ಒಂದು ರೂಪಾಯಿಗೂ ಬೆಲೆ ಇದೆ ಎಂಬುದು ಇಂದು ನಾವು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಿದಾಗ ನಮಗೆ ಅರ್ಥವಾಗುತ್ತದೆ ಎಂದವರು.ಹೊರ ರಾಜ್ಯದಲ್ಲಿ ಹೆಚ್ಚಿನ ಸಂಪಾದನೆಯಿದ್ದರೂ ಉತ್ತಮ ಪರಿಸರ, ನೆಮ್ಮದಿಯ ಜೀವನ ಗ್ರಾಮಗಳಲ್ಲಿ ಮಾತ್ರ ಸಾಧ್ಯ. ಇಂತಹ ಗ್ರಾಮೀಣ ಪರಿಸರ ಉಳಿಯ ಬೇಕಾದರೆ ಕೃಷಿ ಜೀವಂತವಿರಬೇಕು ಇಂದಿನ ಯುವ ಜನಾಂಗಕ್ಕೆ ಭತ್ತ ಕೃಷಿಯ ಮಹತ್ವ ಹಾಗೂ ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕಿದೆ , ಗದ್ದೆ ಕೃಷಿ ಕಡಿಮೆಯಾದಂತೆ ಅಂತರ್ಜಲದ ಮಟ್ಟ ಕುಸಿಯುತ್ತದೆ. ಸಕಾಲಕ್ಕೆ ಮಳೆಯಾಗದೇ ಕೃಷಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಭತ್ತ ಕೃಷಿಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು.

ಹೊರಗಡೆ ದೇಶ ಕಾಯುವ ಸೈನಿಕರಷ್ಟೇ . ಒಳಗಡೆ ಸೈನಿಕರಂತೆ ರೈತರು ನಮ್ಮನ್ನು ಕಾಯುತ್ತಿದ್ದಾರೆ ಆದರಿಂದ ಪ್ರತಿಯೊಬ್ಬರೂ ಸಹ ರೈತರಿಗೆ ವಿಶೇಷ ಗೌರವವನ್ನು ಸಲ್ಲಿಸಬೇಕು ಎಂದರು

ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್,ಪೂವಯ್ಯ,ಮುಕ್ತಾರ್ ಅಹಮದ್,ಪ್ರಶಾಂತ್ ಶೆಟ್ಟಿ,ಪ್ರೀತುಚಂದ್ರಮೌಳಿ,ರಾಘವಿ,ಪರಿಣಿತ ಪ್ರಶಾಂತ್ ಶೆಟ್ಟಿ,ಸಂತೋಷ್,ಸುಮಂತ್,ವೈಬಿ ಸುರೇಶ್,ಕೆಎಲ್ ಸುರೇಶ್,ಉಮೇಶ್ ನಾಟಿ ವೈದ್ಯ,ಆದರ್ಶ,ಮಹೇಶ್,ಹಾಗೂ ಗ್ರಾಮಸ್ಥರಾದ ಚಂದ್ರೇಗೌಡ,ಗಿರೀಶ್,ರಾಮಣ್ಣ,ಪ್ರಭಾಕರ್ ಹಾಗೂ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *