
ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಮಲಸಾವರ ಗ್ರಾಪಂ ವ್ಯಾಪ್ತಿಯ ಬಕ್ಕರವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿವಿಧ ಸೌಲಭ್ಯಗಳಿಂದ ವಂಚಿತವಾಗಿತ್ತು. ಇದನ್ನು ಮನಗಂಡ ಸ್ಥಳೀಯ ಕಾಫಿ ಬೆಳೆಗಾರ ಹಾಗೂ ೭ ಬೀನ್ ಟೀಮ್‌ನ ಕರ‍್ಯದರ್ಶಿ ಮುರುಳೀಧರ್ ಎಸ್.ರವರು ಶಾಲಾ ಮುಂಭಾಗಕ್ಕೆ ಗೇಟ್, ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ಹಾಗೂ ೫೭ ವಿದ್ಯಾರ್ಥಿಗಳು ಸಮರ್ಪಕವಾಗಿ ಕುಳಿತು ಪಾಠ ಪ್ರವಚನ ಕೇಳಲು ಅನುಕೂಲವಾಗುವಂತೆ ಬೆಂಚ್ ವ್ಯವಸ್ಥೆಯನ್ನು ಶಾಲೆಗೆಕಲ್ಪಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥ ರಝಾಕ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗೆ ಮೂಲಭೂತ ಸೌಲಭ್ಯಗಳು ಅವಶ್ಯಕವಾಗಿರುತ್ತವೆ. ಈ ನಿಟ್ಟಿನಲ್ಲಿ ಕಲಿಕೆಯ ಭಾಗವಾಗಿ ಹಲವು ಸೌಲಭ್ಯಗಳನ್ನು ನೀಡಿರುವಂತಹ ಮುರುಳೀಧರ್‌ರವರಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೀಬ್ ಉರ್ ರೆಹಮಾನ್, ಮುಖ್ಯ ಶಿಕ್ಷಕಿ ದಿವ್ಯರವರ ಪರವಾಗಿ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ” ಎಂದರು.
