ಸಕಲೇಶಪುರ : ಇಂದು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ವಿವಿಧ ಸಂಘ-ಸಂಸ್ಥೆಗಳ ಹಾಗೂ ಹಿರಿಯ ನಾಗರಿಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಕಲೇಶಪುರ ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ನಶೆ ಬರುವ ಮಾದಕ ಪದಾರ್ಥಗಳು ಬಹುಬೇಗನೆ ಕೈಗೆ ಸಿಗುವಂತಾಗುತ್ತಿದೆ ಇದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಇಂತಹ ವ್ಯಸನಿಗಳನ್ನು ಮನುಷ್ಯರನ್ನಾಗಿ ಮಾಡುವ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ವಿದ್ಯಾರ್ಥಿಗಳು ಮತ್ತು ಯುವಕರು ಈ ತರಹದ ಚಟಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡು ಮನೆಯಲ್ಲಿ ಹಣಕ್ಕಾಗಿ ತಮ್ಮ ತಂದೆ ತಾಯಿಗಳಿಗೆ ಹಿಂಸೆ ನೀಡಿ ಮನೆಯ ಪದಾರ್ಥಗಳನ್ನು ಎಲ್ಲೆಂದರಲ್ಲಿ ಮಾರಿ ಹಣ ಪಡೆದುಕೊಂಡು ನಶೆಯ ಚಟಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ

ಈ ನಿಟ್ಟಿನಲ್ಲಿ ಆಗಸ್ಟ್ 21ರ ಬುಧವಾರ ಬೆಳಗ್ಗೆ 11:30 ಕ್ಕೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯುವ ಸಭೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಕಾರ್ಯಕ್ಕೆ ತಾಲೂಕಿನ ಉನ್ನತ ಮಟ್ಟದ ಅಧಿಕಾರಿಗಳ , ಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಸಹಾಕಾರವೂ ಕೂಡ ಅಗತ್ಯವಾಗಿದೆ ಅವರೊಂದಿಗೂ ಕೂಡ ಚರ್ಚಿಸಲಾಗಿದ್ದು ಈ ಕಾರ್ಯಕ್ಕೆ ಸಹಾಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಪತ್ರಕರ್ತರಾದ ಮಲ್ನಾಡ್ ಮೆಹಬೂಬ್ , ಜೈ ಭೀಮ್ ಮಂಜು , ಯೋಗೀಶ್, ಪ್ರವೀಣ್ ಜೈ ಮಾರುತಿ ದೇವರಾಜು, ಮಲ್ನಾಡ್ ಜಾಕೀರ್, ನಾರಾಯಣ ಆಳ್ವ, ಲಯನ್ ಸಂಸ್ಥೆಯ ಮಂಜುನಾಥ್, ಆನೆಮಹಲ್ ಹಸೇನಾರ್, ಸಾಗರ್ ಜಾನೆಕೆರೆ, ಮುಸ್ಲಿಂ ಧರ್ಮ ಗುರು ಇಬ್ರಾಹಿಂ ಮುಸ್ಲಿಯಾರ್,ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *