ಅರಸೀಕೆರೆ : ಪ್ರತಿವರ್ಷದ ಸಂಪ್ರದಾಯದಂತೆ ಗೌರಿ ಹಬ್ಬದ 15 ದಿನಗಳ ಮುಂಚಿತವಾಗಿ ಅಮ್ಮನವರ ವಿಗ್ರಹ ತಯಾರು ಮಾಡಲು ಮ್ರುತ್ತಿಕೆ( ಮಣ್ಣು) ತರಲು ಆ 21 ರಂದು ಬುಧವಾರ ಬೆಳಗ್ಗೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನಿಗದಿ ಮಾಡಿದ್ದು ಶುಭ ಮುಹೂರ್ತದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ಮರಿ ದೇವರ ಸಮ್ಮುಖದಲ್ಲಿ ಊರ ವರವಲಯದಲ್ಲಿರುವ ಪಂಚಲಿಂಗೇಶ್ವರ ದೇವಾಲಯ ಮುಂಭಾಗದಲ್ಲಿರುವ ಜಮೀನಿನಲ್ಲಿ ಉತ್ತರಾಧಿಕಾರಿ ಚೇತನ್ ಮರಿ ದೇವರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜಾ ಕೈಂಕಾರಿಯಗಳೊಂದಿಗೆ ತರಲು ಸಜ್ಜುಗೊಂಡಿದೆ

ಈ ಸಂದರ್ಭದಲ್ಲಿ ಭಕ್ತವೃಂದ ಹಾಗೂ ಗ್ರಾಮಸ್ಥರು ಶ್ರದ್ಧಾ ಭಕ್ತಿಯೊಂದಿಗೆ ಪಾಲ್ಗೊಳ್ಳುವ ಮೂಲಕ ಇತಿಹಾಸ ಪ್ರಸಿದ್ಧ ಧಾರ್ಮಿಕ ಆಚರಣೆಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಮೂಲಸ್ಥಾನ ಸ್ವರ್ಣ ಗೌರಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *