
ಸಕಲೇಶಪುರ:- ತಾಲ್ಲೂಕಿನ ಹೆತ್ತೂರಿನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಳೆದ ಐದು ದಿನಗಳಿಂದ ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ಜೋರು ಮಳೆ ಹಾಗೂ ಗುಡುಗು ಸಿಡಿಲಿಗೆ ವಿದ್ಯುತ್ ಪರಿವರ್ತಕ ಹಾಳಾಗಿದು ಐದು ದಿನಗಳಿಂದ ವಿದ್ಯುತ್ ಇಲ್ಲದೆ ವಸತಿ ಶಾಲೆ ಮಕ್ಕಳಿಗೆ ಕುಡಿಯಲು ಹಾಗೂ ಸ್ನಾನಕ್ಕೆ, ಸೇರಿದಂತೆ ಅಡಿಗೆ ಮಾಡಲು ಹೊರಗೆಯಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ.
ಅಲ್ಲದೆ ವಿದ್ಯಾರ್ಥಿಗಳಿಗೆ ರಾತ್ರಿಯ ಸಮಯದಲ್ಲಿ ವಿದ್ಯುತ್ ಇಲ್ಲದೆ ಓದಲು ಹಾಗೂ ಬರೆಯಲು ಆಗುತ್ತಿಲ್ಲ ಈ ಸಮಸ್ಯೆ ಬಗ್ಗೆ ಹೆತ್ತೂರು ಚಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಕ್ರಮ ತೆಗೆದುಕೊಂಡಿಲ್ಲ. ನಿಮ್ಮ ದುಡ್ಡಿನಿಂದ ತಂದು ಹಾಕಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ.
ಹೀಗಾಗಿ ಶಾಲೆಯವರು ನೀರಿನ ಟ್ಯಾಂಕರ್ ಮೂಲಕ ನೀರು ಸಾರಾಬುರಾಜು ಮಾಡುವುದು ಗ್ರಾಮಸ್ಥರು ನೋಡಿ ಸಮಸ್ಯೆ ಬಗ್ಗೆ ತಿಳಿದು ತಮ್ಮ ಮಕ್ಕಳ ಬಗ್ಗೆ ಕೊರಗುವಂತಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಸರ್ಕಾರವು ಮಾಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಗೆ ಸರ್ಕಾರದ ಚೆಸ್ಕಾಂ ಅಧಿಕಾರಿಗಳ ಈ ಮಾತುಗಳು ವಿದ್ಯಾರ್ಥಿಗಳನ್ನು ಪ್ರತಿನಿತ್ಯ ನರಕಕ್ಕೆ ತಳ್ಳುವಂತಾಗಿದೆ.
ದಯಮಾಡಿ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ತಮ್ಮ ಮಕ್ಕಳ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಹೆತ್ತೂರಿನ ಚೆಸ್ಕಾಂ ಸಂಸ್ಥೆಯ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಪೋಷಕರು ಎಚ್ಚರಿಕೆ ನೀಡಿದರು




