ಹಾಸನ: ಹಾಸನ ನಗರ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಶಾಸಕ ಎಚ್.ಪಿ. ಸ್ವರೂಪ್ ತಮ್ಮ ಆಪ್ತರಿಗೆ ಗಾದಿ ಕೊಡಿಸುವ ಮೂಲಕ ತಮ್ಮ ನಾಯಕತ್ವದ ಹಿಡಿತ ಸಾಬೀತುಪಡಿಸಿದರು.

9ನೇ ವಾರ್ಡ್ ಜೆಡಿಎಸ್ ಸದಸ್ಯ ಎಂ.ಚಂದ್ರೇಗೌಡ ಅಧ್ಯಕ್ಷರಾಗಿ ಹಾಗೂ ಬಿಜೆಪಿಯಿಂದ ಆಯ್ಕೆಯಾದರೂ ಜೆಡಿಎಸ್ ಬೆಂಬಲಿಸಿದ್ದ 35ನೇ ವಾರ್ಡ್ ಸದಸ್ಯೆ ಲತಾದೇವಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಒಟ್ಟು 35 ಸಂಖ್ಯಾ ಬಲದ ಹಾಸನ ನಗರಸಭೆಯಲ್ಲಿ ಜೆಡಿಎಸ್ 17, ಕಾಂಗ್ರೆಸ್ 2, ಬಿಜೆಪಿ 14 ಸದಸ್ಯರ ಬಲ ಹೊಂದಿದ್ದು ಇಬ್ಬರು ಪಕ್ಷೇತರರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಒಟ್ಟು 19 ಮತಗಳ ಅಗತ್ಯವಿತ್ತು. ಇಬ್ಬರು ಕಾಂಗ್ರೆಸ್ ಸದಸ್ಯರನ್ನು ಹೊರತುಪಡಿಸಿ ಉಳಿದ ಎಲ್ಲ 34 ಸದಸ್ಯರು ಚಂದ್ರೇಗೌಡ ಪರ ಕೈ ಎತ್ತಿ ಮತ ಚಲಾಯಿಸಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದರು.

ಕಣದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕೇವಲ 2 ಮತ ಪಡೆದರು.

ಬಿಜೆಪಿಗೆ ಕೈಕೊಟ್ಟ ಮೈತ್ರಿ: ನಗರಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದ ಲತಾದೇವಿ 21 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಬಿಜೆಪಿಯ ಶಿಲ್ಪಾ ವಿಕ್ರಂ 14 ಮತಗಳಿಸಿ ಪರಾಭವ ಗೊಂಡರು.

ಬಿಜೆಪಿ ಶಿಲ್ಪಾವಿಕ್ರಂ ಅವರನ್ನು ಕಣಕ್ಕಿಳಿಸಿತ್ತು. ವಿಪ್ ಜಾರಿ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಗಾದ ಲತಾದೇವಿ ಶಿಲ್ಪಾವಿಕ್ರಂ ಪರ ಮತಹಾಕಿದ್ದು ವಿಶೇಷವಾಗಿತ್ತು. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಸಹ ಮತ ಚಲಾಯಿಸಿದರು.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಅವರು ಅತ್ತ ಬಿಜೆಪಿ ಸದಸ್ಯೆ ಉಪಾಧ್ಯಕ್ಷರಾಗುವಂತೆ ನೋಡಿಕೊಂಡಿದ್ದಲ್ಲದೇ ತಮ್ಮ ಪಕ್ಷದ ವರಿಷ್ಠ ಎಚ್.ಡಿ.ರೇವಣ್ಣ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಅವರ ಕಾರ್ಯತಂತ್ರಗಳನ್ನು ವಿಫಲಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *