ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಪರಿಚಯಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ವಿದ್ಯಾರ್ಥಿಗಳು “ಅನುಭವವೇ ಪರಮ ಗುರು” ಎಂಬ ಧ್ಯೇಯವಾಕ್ಯನ್ನಿಟ್ಟುಕೊಂಡು ತಾವುಗಳು ಹಳ್ಳಿಯಲ್ಲಿ ತಂಗಿದ ಕಾರಣವನ್ನು ಉದ್ಧೇಶಿಸಿ ಕಿರುನಾಟಕವನ್ನು ಪ್ರದರ್ಶಿಸಿದರು.

ಈ ಕಿರುನಾಟಕದಲ್ಲಿ ತಾವುಗಳು ಮೂರು ತಿಂಗಳುಗಳ ಕಾಲ ಮುಂದೆ ಏನೇನು ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂಬುದನ್ನು ಅಮೋಘವಾಗಿ ಪ್ರದರ್ಶಿಸಿದರು. ದೀಪಕ್ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮವು ಸುಗಮವಾಯಿತು.

ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಗ್ರಾಮದ ಜನರಿಗೆ ಸ್ವಚ್ಛ ಗ್ರಾಮದ ಮಹತ್ವವನ್ನು,ಅಣಬೆ ಬೇಸಾಯ ಕ್ರಮದ ಎಲ್ಲಾ ರೈತರು ಅಳವಡಿಸಿಕೊಳ್ಳುವ ಅತ್ಯಂತ ಸುಲಭ ಪದ್ದತಿಯಾಗಿದೆ ಎಂದು,ಅದೇ ರೀತಿಯಲ್ಲಿ ತ್ವರಿತ ಆದಾಯ ನೀಡುವ ಕೃಷಿ ಪದ್ದತಿಗಳ ಪರಿಚಯಿಸುವುದರಲ್ಲಿ ಯಶಸ್ವಿಯಾದರು. ಅವುಗಳೆನಂದರೆ ಜೇನು ಕೃಷಿ,ರೇಷ್ಮೆ ಕೃಷಿ ಮುಂತಾದವುಗಳು ರೈತರ ಆಸಕ್ತಿಯ ಅನುಗುಣವಾಗಿ ಮುಂದಿನ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಪಟೇಲ್ ಕೃಷ್ಣೇಗೌಡರು,ನಾರಾಯಣಗೌಡರು,ರಾಮೇಗೌಡರು ಹಾಗೂ ಜಗದೀಶ ಭಾಗಿಯಾಗಿದ್ದರು ಮತ್ತು ಮಂಜೇಗೌಡರು ಡೈರಿ ಸೆಕ್ರಟರಿ, ಶೇಖರಣ್ಣ,ಜಯಣ್ಣ,ರಾಜೇಗೌಡರು,ಮತ್ತು ಪಟೇಲ್ ದೇವೇಗೌಡರು ಸಹ ಭಾಗಿಯಾಗಿದ್ದರು.

ಈ ಕಾರ್ಯಕ್ರಮವು ಇವರೆಲ್ಲರ ಸಹಭಾಗಿತ್ವದಲ್ಲಿ ಯಶಸ್ವಿಯಾಯಿತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *