
ಅರಸೀಕೆರೆ : ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿಯಾಗಿರುವ ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಶ್ರೀ ಮೂಲಸ್ಥಾನ ಗೌರಮ್ಮ ದೇವಿಯವರ ಪ್ರತಿಷ್ಠಾಪನಾಮಹೋತ್ಸವಕ್ಕೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರ ಪಾದಪೂಜೆಯೊಂದಿಗೆ ಬುಧವಾರ ಚಾಲನೆ ನೀಡಲಾಯಿತು
ಗ್ರಾಮದ ಸ್ವರ್ಣ ಗೌರಮ್ಮನವರ ಮೂಲ ಸನ್ನಿಧಿಯಲ್ಲಿ ಕೋಡಿಮಠದ ಶ್ರೀಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಲಾಯಿತು
ಮಹಾಮಂಗಳಾರತಿಯ ನಂತರ ಚೇತನ್ ಮರಿದೇವರ ಜೊತೆಯಲ್ಲಿ ಸೇರಿದ ಮೂಲಸ್ಥಾನ ಸೇವಾ ವ್ಯವಸ್ಥಾಪಕ ಸಮಿತಿ ಸದಸ್ಯರು ಭಕ್ತವೃಂದ ಹಾಗೂ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಗ್ರಾಮದ ವರವಲಯದಲ್ಲಿರುವ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ತೋಟದಲ್ಲಿ ಪೂಜೆ ಸಲ್ಲಿಸಿ ವೃತ್ತಿಕೆಯನ್ನು ಮೂಲ ಸನ್ನಿಧಿಗೆ ತರಲಾಯಿತು ತರಲಾಯಿತು
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ್ ಗೌರವಾಧ್ಯಕ್ಷ ಎಸ್ ಮಲ್ಲಿಕಾರ್ಜುನಪ್ಪ ಗ್ರಾಮದ ಮುಖಂಡರಾದ ಎಮ್ ಸಿ ನಟರಾಜ್ ಎಂಜಿ ಶಿವಣ್ಣ ಎಂ ಜೆ ಸಂತೋಷ್ ಎಂಬಿ ಅಶೋಕ್ ಯೋಗೀಶ್ ಹೊಸಹಳ್ಳಿ ಶಿವಣ್ಣ ಎಚ್ ಎಮ್ ಸಂತೋಷ್ ದಲಿತ ಮುಖಂಡರಾದ ಕಟ್ಲೆ ತಿಮ್ಮಯ್ಯ ಸೋಮಶೇಖರ್ ದಾಸಪ್ಪ ಮುಂತಾದವರು ಭಾಗವಹಿಸಿದ್ದರು

