
ಸಕಲೇಶಪುರ : ಪುರಸಭೆ ಅದ್ಯಕ್ಷ ಉಪಾದ್ಯಕ್ಷ ಚುನಾವಣೆ ದಿನಾಂಕ ಇದೀಗ ಆಗಸ್ಟ್ 26 ರಂದು ನಿಗದಿಯಾಗಿದ್ದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿದ್ದು ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ವಿಷಯ ಪ್ರಸ್ತಾಪವಾದ ಹಿನ್ನಲೆಯಲ್ಲಿ
ಬಹುಮತವಿರುವ ಸಕಲೇಶಪುರ ಜೆಡಿಎಸ್ ನ್ನು ಹೈ ಕಮಾಂಡ್ ಜೆಡಿಎಸ್ ತೆಕ್ಕೆಗೆ ಪುರಸಭೆಯನ್ನು ಹಿಡಿಯಲು ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಎಲ್ಲಾ ಸದಸ್ಯರೊಂದಿಗೆ ಮಾತುಕತೆ ನಡೆಸಿ ಒಗ್ಗಟ್ಟು ಕಾಪಾಡುವಂತೆ ಸಭೆ ನಡೆಸಿ ಸದಸ್ಯರ ಒಗ್ಗಟ್ಟನ್ನು ತೋರಿಸುವ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರು ಊಟಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
