
ಆಲೂರು : ತಾಲ್ಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಶಿವಸಾಗರ ಗ್ರಾಮದಲ್ಲಿ ಕಳೆದ ಹಿಂದೆ ಸುರಿದ ನಿರಂತರ ಮಳೆಗೆ ದೇವಸ್ಥಾನದ ಮಣ್ಣಿನ ಗೋಡೆ ಕುಸಿದು ಬಿದ್ದಿದೆ ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಬಂದು ದೇವಸ್ಥಾನಕ್ಕೆ ನೆರವು ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಶಿವಸಾಗರ ಗ್ರಾಮದ ಚಂದ್ರು ಶೇಖರ್ ಮಾತಾನಾಡಿ ನಮ್ಮ ಗ್ರಾಮದಲ್ಲಿ 50ವರ್ಷದ ಹಳೆಯ ಕಾಲದ ಲಕ್ಷ್ಮಿದೇವಿ ಹಾಗೂ ವೆಂಕಟೇಶ್ವರ ದೇವಸ್ಥಾನವಿದ್ದು ಕಳೆದ ತಿಂಗಳಿಂದ ಸುರಿದ ಮಳೆಗೆ ದೇವಸ್ಥಾನದ ಮಣ್ಣಿನಗೋಡೆ ಕುಸಿದು ಬಿದ್ದಿದೆ
ಈ ಬಗ್ಗೆ ಕಳೆದ ಒಂದು ತಿಂಗಳ ಹಿಂದಿಯೇ ತಹಸೀಲ್ದಾರ್ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಪತ್ರ ಕೊಟ್ಟರು ಯಾರು ಕೂಡ ಗಮನಹರಿಸಿಲ್ಲ ಇತ್ತ ತಿರುಗಿ ಸಹ ನೋಡಿಲ್ಲ ಹಾಗಾಗಿ ಕೊಡಲೇ ಸಂಬಂಧಪಟ್ಟವರು ಸ್ಥಳ ಪರಿಶೀಲನೆ ನೆರವು ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಚುನಾವಣೆಯನ್ನು ಬಹಿಸ್ಕರಿಸುವುದಾಗಿ ತಿಳಿಸಿದರು.
ಗ್ರಾಮದ ದೇವಸ್ಥಾನದ ಪೂಜಾರಿ ವೆಂಕಟೇಶ್ ಮಾತಾನಾಡಿ ಈ ಹಿಂದೆ ಸುರಿದ ಮಳೆಗೆ ದೇವಾಲಯದ ಹಿಂದಿನ ಭಾಗದ ಗೋಡೆ ಕುಸಿದಿದೆ.
ಗೋಡೆ ಕುಸಿದ ಕಾರಣ ದೇವಸ್ಥಾನ ಸಂಪೂರ್ಣವಾಗಿ ಹಾಳಾಗಿದೆ ಕಳೆದ ಕೆಲ ದಿನದಿಂದ ಈ ದೇವಸ್ಥಾನದ ಗೋಡೆ ಶಿಥಿಲಾವಸ್ಥೆಯಲ್ಲಿತ್ತು.
ಆದರೆ ಸತತ ಮಳೆಯಿಂದ ಗೋಡೆ ಕುಸಿದು ದೇವಸ್ಥಾನ ವಿರೂಪಗೊಂಡಿದೆ ಈಗ ದೇವಸ್ಥಾನದಲ್ಲಿ ದೇವರನ್ನು ಹಿಟ್ಟಿ ಪೂಜೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ ತಾತ್ಕಾಲಿಕವಾಗಿ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದೇವೆ ಮನೆಯಲ್ಲಿ ಹೆಂಗಸರು ಮಕ್ಕಳು ಇರುವುದರಿಂದ ಪೂಜೆ ಮಾಡಲು ಕಷ್ಟವಾಗುತ್ತದೆ ಹಾಗಾಗಿ ದಯಮಾಡಿ ಈ ದೇವಸ್ಥಾನಕ್ಕೆ ಪರಿಹಾರ ನೀಡಿ ದೇವಸ್ಥಾನ ನೆಲೆ ನಿಲ್ಲಲು ಸಹಕಾರ ಮಾಡಿಕೊಡಬೇಕೆಂದು ಶಾಸಕರು ಹಾಗೂ ತಹಸೀಲ್ದಾರ್ ಗೆ ಮನವಿ ಮಾಡಿ ಈ ದೇವಸ್ಥಾನ ಸಂರಕ್ಷಣೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕಾಳಯ್ಯ, ಸಂಜು,ದ್ಯಾವಯ್ಯ, ಬಸವರಾಜು,ಜಯಣ್ಣ, ಸಂಪತ್ತು, ರಂಗಮ್ಮ, ಸಣ್ಣಮ್ಮ, ಇತರರಿದ್ದರು.



