
ಸಕಲೇಶಪುರ : ತಾಲ್ಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ರತಿಷ್ಠಾಪಿಸುವ 8 ನೇ ವರ್ಷದ ರಾಮಧೂತ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾರ್ಯಕ್ರಮದ ಡಿಜಿಟಲ್ ಕರಪತ್ರವನ್ನು ನಗರದ ಶ್ರೀ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ, ಸ್ವಾಗತ ಸಮಿತಿಯ ಗೌರವ ಉಪಸ್ಥಿತರಾದ ಏಲಕ್ಕಿ ಚಂದ್ರು ಹಾಗೂ ಆಚಂಗಿ ವಿಕಾಸ್ ಅವರು ಸೇರಿದಂತೆ ವ್ಯವಸ್ಥಾಪನಾ ಸಮಿತಿಯ ಸಂಚಾಲಕ್ ಪ್ರದೀಪ್ ಪೂಜಾರಿ ರವರು ಉದ್ಘಾಟಿಸಿದರು.
ಇಂದು ಸಂಜೆ 4:00 ಗಂಟೆಗೆ ರಾಮಧೂತ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿ ಪೂಜೆ – ಗೋಪೂಜೆ ಹಾಗೂ ಧ್ವಜಾರೋಹಣ ನಡೆಯಲಿದೆ ಎಂದು ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಗುರುಮೂರ್ತಿ. ಹಾರ್ಲೆಕುಡಿಗೆ ರವಿ. ರಾಜೇಶ್. ದುಶ್ಯಾಂತ್ ಗೌಡ. ಸೇರಿದಂತೆ ವಿಹಿಂಪ ರಾಜ್ಯ ಮುಖಂಡ ರಘು ಸಕಲೇಶಪುರ. ಬಜರಂಗದಳದ ಕೌಶಿಕ್ ಹೆಚ್.ಎಂ. ವಿಜಿತ್ ಗೌಡ. ಹೆಬ್ಬಸಾಲೆ ರವಿ. ಸೇರಿದಂತೆ ಕಾರ್ಯಕರ್ತರು ಇದ್ದರು.



