ಸಕಲೇಶಪುರ : ತಾಲ್ಲೂಕಿನ ಬಿರಡಳ್ಳಿಯಲ್ಲಿ ಸಕಲೇಶಪುರ ಲಯನ್ಸ್ ಕ್ಲಬ್ ವತಿಯಿಂದ ಗದ್ದೆ ನಾಟಿಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿರಡಳ್ಳಿಯ ಶಿವಪ್ಪ ಗೌಡರ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಜಿ ಅಧ್ಯಕ್ಷರಾದ ಲಯನ್ಸ್ ಆನಂದ್ ಲಿಯೋ ಮಾತನಾಡಿ ಗ್ರಾಮೀಣ ಪರಿಸರ ಉಳಿಯ ಬೇಕಾದರೆ ಕೃಷಿ ಜೀವಂತವಿರಬೇಕು. ಇಂದಿನ ಯುವ ಜನಾಂಗಕ್ಕೆ ಭತ್ತ ಕೃಷಿಯ ಮಹತ್ವ ಹಾಗೂ ಅನಿವಾರ್ಯತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ,

ಅಂತರ್ಜಲದ ಮಟ್ಟ ಕುಸಿಯುವುದಕ್ಕೆ ಮೂಲ ಕಾರಣ ಗದ್ದೆಯಲ್ಲಿ ಕೃಷಿ ಮಾಡದಿರುವುದು. ಸರಿಯಾದ ಸಮಯದಲ್ಲಿ ಮಳೆಯಾಗದೇ ಕೃಷಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಭತ್ತ ಕೃಷಿಯ ಮಹತ್ವವನ್ನು ಅರಿತುಕೊಳ್ಳಬೇಕೆಂದು ಹೇಳಿದರು .ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ,ಕಾರ್ಯದರ್ಶಿಯವರಾದ ವೆಂಕಟೇಶ್ ಕೆ. ಆರ್,ಖಜಾಂಚಿವರಾದ ಪ್ರೇಮನಾಥ್, ಡಾಕ್ಟರ್ ಸುಧಾಕರ್ ವಿಠ್ಠಲ್, ಗಿರೀಶ್,ಮಂಜು,ಜೈ ಕುಮಾರ್, ಜೈ ಕುಮಾರ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *