ಬೇಲೂರು : ತಾಲೂಕಿನ ಬಿಕ್ಕೋಡು. ಹೋಬಳಿಯ ಬಕ್ರವಳ್ಳಿ . ಮೊಗಸಾವರ .ಗ್ರಾಮದ ಸುತ್ತಮುತ್ತಲಿನಲ್ಲಿ ಕಾಡಾನೆಗಳ ಹಿಂಡು ಕಳೆದ ಒಂದು ವಾರದಿಂದ ಬೀಡು ಬಿಟ್ಟು ಕೃಷಿಕರ ಮತ್ತು ಕಾಫಿ ಬೆಳಗಾರರ ಬೆಳೆಗಳನ್ನು ಹಾನಿ ಮಾಡುತ್ತಿದ್ದರು ಇಲಾಖೆಯವರು ತಿಳಿದು ಸುಮ್ಮನಿರುವಂತಿದೆ ಎಂದು ಬೆಳೆಗಾರರು ತಮ್ಮ ಸಂಕಷ್ಟವನ್ನು ನೋಡಿಕೊಂಡರು.

ತಾಲೂಕಿನ ಬಕ್ರವಳ್ಳಿ ಗ್ರಾಮದ ನಂದೀಶ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಪೃಥ್ವಿ ಅವರ ತೋಟಗಳಿಗೆ ಭುವನೇಶ್ವರಿ ಹೆಸರಿನ ಕಾಡನೆಗಳ ಹಿಂದು ದಾಳಿ ನಡೆಸಿ ಕಾಫಿ ಮೆಣಸು ಹಾಗೂ ಗೇಟ್ ಪೈಪ್ ಲೈನ್ ಗಳನ್ನು ತೊಳೆದು ಸಂಪೂರ್ಣ ಹಾನಿ ಮಾಡಿದೆ.ಈ ಸಂದರ್ಭದಲ್ಲಿ ಮಾತನಾಡಿದ ಬೆಳೆಗಾರರಾದ ನಂದೀಶ್ ಒಂದು ವಾರದಿಂದ ನಮ್ಮ ಭಾಗದಲ್ಲಿ ಸುಮಾರು 8 ಕಾಡಾನೆಗಳ ಹಿಂದು ಪ್ರತ್ಯಕ್ಷವಾಗಿ ಸಂಪೂರ್ಣವಾಗಿ ಬೆಳೆಯನ್ನ ನಾಶ ಮಾಡುತ್ತಿವೆ

ಕಾರ್ಮಿಕರು ಸಹ ತೋಟಕ್ಕೆ ಬರಲು ಹೆದರಿತಿರುವುದರಿಂದ ಕೆಲಸ ಮಾಡಿಸುವುದಾದರೂ ಹೇಗೆ ಇನ್ನು ಪ್ರತಿನಿತ್ಯ ಮಳೆ ಸುರಿಯುತ್ತಿರುವುದರಿಂದ ಕಾಫಿ ಬೆಳೆ ಕೊಳೆರೋಗ ಬಂದು ಕರಗುತ್ತಿದ್ದು ಅದಕ್ಕೆ ಔಷಧಿ ಸಿಂಪರಣೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ನೀವು ಓಡಿಸಬೇಡಿ ಅವುಗಳು ತಾವಾಗಿ ವಾಪಸ್ ಹೋಗುತ್ತವೆ ಎಂದು ನಮಗೆ ಹೇಳುತ್ತಿರುವುದರಿಂದ ನಾವು ಪಟಾಕಿ ಹೊಡೆಯುವುದಾಗಲಿ ಏನನ್ನು ಸಹ ಮಾಡುತ್ತಿಲ್ಲ

ಆದರೂ ಸಹ ಸ್ಥಳದಲ್ಲಿ ಬಿಡು ಬಿಟ್ಟು ಇದರಿಂದ ಬೆಳೆ ಸಂಪೂರ್ಣ ಹಾಳಾಗುತ್ತಿದೆ ದಯಮಾಡಿ ಅರಣ್ಯ ಇಲಾಖೆಯವರು ಇಲ್ಲಿರುವಂತಹ ಕಾಡಾನೆಗಳನ್ನು ಬೇರೆಯವರಿಗೆ ಸ್ಥಳಾಂತರ ಮಾಡಬೇಕು ಎಂದು ಮನವಿ ಮಾಡಿದರು .

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷರಾದ ಅದ್ದೂರಿ ಕುಮರ್ ನಮ್ಮ ಬಿದ್ಕೊಂಡು ಹೋಬಳಿ ಭಾಗದಲ್ಲಿ ಒಂದು ವಾರದಿಂದ ಸುಮಾರು 38 ಹೆಚ್ಚು ಕಾಡಾನೆಗಳು ಗ್ರಾಮದ ಸುತ್ತ ಮುತ್ತ ಕಳೆದ ಒಂದು ವಾರಗಳಿಂದ ಸುಮಾರು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಗ್ರಾಮದ ಭಕ್ತವಳ್ಳಿ ಗ್ರಾಮದ ನಂದೀಶ್ ಪೃಥ್ವಿ ಮಂಜೇಗೌಡ ಚೇತನ್,ಲೋಕೇಶ್,ಸುಜಿತ್ ದೇವರಾಜ್ ಶೆಟ್ಟಿ, ಪ್ರಕಾಶ್ ಹಾಗು ಸುತ್ತಮುತ್ತಲಿನ ಕೃಷಿಕರ ಕಾಫಿ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಹಾನಿ ಮಾಡುತ್ತಿದ್ದರು ಅರಣ್ಯ ಇಲಾಖೆಯವರು ಒಂದು ತೋಟದಿಂದ ಬೇರೆ ತೋಟಕ್ಕೆ, ಒಂದು ಊರಿನಿಂದ ಇನ್ನೊಂದು ಊರಿಗೆ ಕಾಡಾನೆಗಳನ್ನು ಓಡಿಸುವುದನ್ನೇ ರೂಢಿ ಮಾಡಿಮಾಡಿಕೊಂಡಿರುವಂತಿದೆ?

ಅರಣ್ಯ ಇಲಾಖೆಯು ಕೃಷಿಕರ ಪಾಲಿಗೆ ಇದೆಯೋ? ಅಥವಾ ಇಲ್ಲವೇ? ಎಂಬ ಅನುಮಾನ ನಮಗೆಲ್ಲ ಮೂಡುತ್ತಿದ್ದೆ.ಒಂದೆಡೆಹಲವಾರು ಕೃಷಿಕರಿಗೆ ತಾನು ಕಷ್ಟ ಪಟ್ಟು ಬೆಳೆದ ಬೆಳೆ ಕಾಡಾನೆಗಳಿಂದ ನಾಶವಾಗುತ್ತಿದ್ದರು ಅವರಿಗೆ ಸೂಕ್ತ ಪರಿಹಾರವು ದೊರೆಯುತ್ತಿಲ್ಲ, ಕಾಡಾನೆಗಳ ದಾಂದಲೆಗೆ ನಾಶವಾಗಿರುವ ಬೆಳಗ್ಗೆ ಇನ್ನೂ ವರ್ಷ ಕಳೆದರೂ ಪರಿಹಾರದ ಸುಳಿವೆ ಇಲ್ಲಾ, ಇದೆ ರೀತಿ ಮುಂದುವರೆದರೆ ಕೃಷಿಕರ ಭವಿಷ್ಯವೇನು .

ಇನ್ನೆಷ್ಟು ಬೆಳೆ ಹಾನಿಯಾಗಬೇಕು? ಇದಕ್ಕೆಲ್ಲಾ ಅಂತಿಮ ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಕೇವಲ ನಮ್ಮ ಕನ್ನಡಿಸುವ ತಂತ್ರವನ್ನು ಮಾಡದೆ ನಮಗೆ ಶಾಶ್ವತವಾಗಿ ಪರಿಹಾರ ನೀಡುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *