
ಬೇಲೂರು : ತಾಲೂಕಿನ ಅರೇಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಮತಾ ರವರು ತನ್ನ ಉತ್ತಮ ವೈದ್ಯೆ ಸೇವೆಯ ಜೊತೆಗೆ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ,ಆಸ್ಪತ್ರೆಯ ಸಿಬ್ಬಂದಿಗಳ ಹಾಗು ನೆರೆ ಹೊರೆಯವರ ಅಭಿಮಾನ ಗಳಿಸುತ್ತಾ ಬಂದಿರುವ ಅವರು ಈದಿನ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಿ ,ಹೆರಿಗೆ ಮತ್ತು ಹೆರಿಗೆಯ ನಂತರ ತಾಯಿ ಮಗುವಿನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆಗಳನ್ನೂ ನೀಡಿದರು.
ನಂತರ ತನ್ನ ತಾಯಿ ಹಾಗು ತಂಗಿಯ ಹುಟ್ಟು ಹಬ್ಬದ ಪ್ರಯುಕ್ತ ಸೀಮಂತ ಕಾರ್ಯಕ್ರಮ ಏರ್ಪಡಿಸಿ ಸುಮಾರು 26 ತುಂಬು ಗರ್ಭಿಣಿಯರಿಗೆ ಮನೆಯಲ್ಲಿ ನೆರವೇರಿಸುವ ರೀತಿಯಲ್ಲಿ ಸಿಹಿ ತಿಂಡಿಗಳನ್ನು ಹಂಚಿ ಹರಸಿನ ಕುಂಕುಮದ ಜೊತೆಗೆ ಬಳೆ ಹಾಗು ಸೀರೆಯೊಂದಿಗೆ ಮಡಿಲು ತುಂಬಿಸಿ ಎಲ್ಲರಿಗೂ ಶುಭಹಾರೈಸಿದರು.
ಈ ವೇಳೆ ಗರ್ಭಿಣಿ ಮಹಿಳೆಯಾದಂತಹ ವಿಮಲ ಗಣೇಶ್ ಮಾತನಾಡಿನಾನು ಕಳೆದ ಆರೇಳು ತಿಂಗಳಿಂದ ತಪಾಸಣೆಗಾಗಿ ಇಲ್ಲಿಗೆ ಬರುತ್ತಿದ್ದೇನೆ ಅನೇಕರು ಸರ್ಕಾರಿ ಆಸ್ಪತ್ರೆ ಅಂದರೆ ಅಸಡ್ಡೆ ತೋರುತ್ತಾರೆ ಆದರೆ ನನಗೆ ಇಲ್ಲಿಗೆ ಬಂದ ಮೇಲೆ ತಿಳಿಯಿತು ವೈದ್ಯರು ತನ್ನ ಉತ್ತಮ ವೈದ್ಯೆ ಸೇವೆಯನ್ನು ಎಸ್ಟು ನಿಷ್ಠೆಯಿಂದ ಮಾಡುತ್ತಾರೆ ಎಂದು,ನನಗೆ ಹೆರಿಗೆಯ ಬಗ್ಗೆ ತುಂಬಾ ಭಯವಾಗುತ್ತಿತ್ತು ಆದರೆ ಅದನ್ನೆಲ್ಲ ಹೋಗಲಾಡಿಸಿ ದೈರ್ಯ ತುಂಬಿದ್ದಾರೆ.
ನಾ ಕಂಡಂತೆ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸುವುದಕ್ಕೆ ,ಹೆರಿಗೆಯ ವಿಷಯದಲ್ಲಿ ಬಹುತೇಕ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ ನಿದರ್ಶನಗಳಿವೆ. ಆದರೆ ಇಲ್ಲಿಯ ವೈದ್ಯಾಧಿಕಾರಿಗಳು ,ಆಸ್ಪತ್ರೆಯ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ.
ಈ ದಿನ ನಮಗೆಲ್ಲರಿಗೂ ಮನೆಯ ರೀತಿಯಲ್ಲಿ ಸೀಮಂತ ಮಾಡಿ ಮಡಿಲು ತುಂಬಿರುವುದಕ್ಕೆ ಸಂತೋಷವಾಗಿದೆ ಎಂದರು..
ಈ ವೇಳೆ ಡಾ.ಅನುಪಮ ,ಮಂಗಳಮ್ಮ ,ಶೃತಿ,ತಾಸಿನ ,ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗದವರು ಹಾಗು ಇತರರು ಹಾಜರಿದ್ದರು.


