ಸಕಲೇಶಪುರ :ತಾಲೂಕಿನ ಕೌಡಳ್ಳಿಯಲ್ಲಿ ರುವ jss ಕನ್ನಡ ಮಾಧ್ಯಮ ಪ್ರೌಢ ಶಾಲೆಯ 130 ಮಕ್ಕಳಿಗೆ ಡಿ ಆರ್ ಷಣ್ಮುಖಪ್ಪ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರೀತಿ ಯವರು ಉಚಿತವಾಗಿ ತಲಾ 5 ನೋಟ್ ಬುಕ್ ಹಾಗೂ ಜಾಮೀಟ್ರೀ ಬಾಕ್ಸ್ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಫಿ ಬೆಳೆಗರರಾದ ಟಿ ಪಿ ಸುರೇಂದ್ರ ರವರು ಮಾತನಾಡುತ್ತ ಪ್ರೀತಿಯವರ ದಾನ ಮಾಡುವ ಗುಣ ಎಲ್ಲರಲ್ಲೂ ಬರಲಿ, ಪ್ರೀತಿಯವರು ತನ್ನ ತಂದೆಯ ನೆನಪಿಗಾಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದು, ವಿದ್ಯಾರ್ಥಿಗಳು ಕೂಡಾ ಮುಂದಿನ ದಿನಗಳಲ್ಲಿ ಈ ಆದರ್ಶಗಳನ್ನ ಮೈಗುಡಿಸಿಕೊಳ್ಳಬೇಕು ಎಂದರು,

ಹಾಗೆಯೇ ಷಣ್ಮುಕಪ್ಪ ಟ್ರಸ್ಟ್ ನ ಕುಟುಂಬದವರೆಲ್ಲರಿಗೂ ಭಗವಂತ ಒಳ್ಳೆಯದನ್ನು ಕರುಣಿಸಲಿ ಎಂದರು, ಮತ್ತೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ JSS ಸಂಸ್ಥೆಯ ಸಂಯೋಜಕರಾದ ಆರ್ ಮಂಜುನಾಥ್ ರವರು ಮಾತನಾಡುತ್ತ ನಮ್ಮ ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳು ಕೂಲಿ ಕಾರ್ಮಿಕರ ಮಕ್ಕಳು, ನಿಮ್ಮ ಟ್ರಸ್ಟ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದಕ್ಕೆ, ವಿದ್ಯಾರ್ಥಿಗಳ ಪರವಾಗಿ ಟ್ರಸ್ಟ್ ನ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಪ್ರೀತಿ, ಡಾಕ್ಟರ್ ನಂಜುಂಡಪ್ಪ, ರೇಣುಕಾರಾಧ್ಯ ಲೋಹಿತ್ ಕೌಡಳ್ಳಿ, ಶ್ರೀಮತಿ ಲಕ್ಷ್ಮಿ,ಯಶೋದಾಮ್ಮಾ ಶಾಲೆಯ ಎಲ್ಲಾ ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *