
ಕಳೆದ ಕೆಲವು ತಿಂಗಳ ಹಿಂದೆ ಎಲ್ಲರನ್ನೂ ಬೆಚ್ಚಿ ಭೀಳಿಸಿ ಭಯ ಸೃಷ್ಠಿಮಾಡಿದ್ದ ಭೀಮ ಎಂಬ ಒಂಟಿ ಸಲಗ ಇದೀಗ ಅಚಗೋಡನಹಳ್ಳಿ ಅರಣ್ಯದಲ್ಲಿ ಬಿಡು ಬಿಟ್ಟಿದ್ದು ಜನರಲ್ಲಿ ಭಯ ಉಂಟು ಮಾಡಿದೆ ಕೂಡಲೇ ಅರಣ್ಯ ಇಲಾಖೆಯವರು ಈ ಆನೆಯನ್ನು ಸೆರೆ ಹಿಡಿಯಬೇಕೆಂದು ಜಿಲ್ಲಾ ಕರವೇ ಕಾರ್ಯದರ್ಶಿ ರಘು ಪಾಳ್ಯ ಒತ್ತಾಯಿಸಿದ್ದಾರೆ.
ಹಲವು ದಿನಗಳಿಂದ ಭೀಮ ಎಂಬ ಒಂಟಿ ಸಲಗ ಹಗಲು ವೇಳೆಯಲ್ಲಿ ಅರಣ್ಯದಲ್ಲಿ ನಿಂತಿರುತ್ತದೆ, ರಾತ್ರಿ ವೇಳೆಯಲ್ಲಿ ರೈತರು ಬೆಳೆದಿರುವ ಮೆಕ್ಕೆ ಜೋಳದ ಬೆಳೆಯನ್ನು ತಿಂದು ನಷ್ಟ ಮಾಡುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ದಯವಿಟ್ಟು ಹಾಸನ ಜಿಲ್ಲಾ ಅರಣ್ಯಾಧಿಕಾರಿಗಳು ಇತ್ತು ಕಡೆ ಗಮನಹರಿಸಿ ಕೂಡಲೇ ಭೀಮ ಕಾಡಾನೆಯನ್ನು ಸೆರೆ ಹಿಡಿಯಬೇಕು ಎಂದು ರೈತರಾದ ಕರವೇ ಹಾಸನ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಯಾದ ರಘು ಪಾಳ್ಯ ಮನವಿ ಮಾಡಿದ್ದಾರೆ.
